ಬಾಗಲಕೋಟೆ: ನೇಕಾರ ಕ್ಷೇತ್ರಕ್ಕೆ ಸುಮಾರು ನೂರಾರು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿದ್ದು ಯಾರಾದರೂ ಇದ್ದರೆ ಅದು ಮಾಜಿ ಸಚಿವೆ ಉಮಾಶ್ರೀ ಮಾತ್ರ.ತೇರದಾಳ ಮತಕ್ಷೇತ್ರದ ಮಾಜಿ ಸಚಿವೆ ಉಮಾಶ್ರೀ ಯವರ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಅದು ಸತ್ಯಕ್ಕೆ ದೂರವಾದ್ದದು ಎಂದು ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ. ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ. ದಾಖಲೆ ಸಮೇತ ಬಿಡುಗಡೆಗೊಳ್ಳಿಸಿ ಮಾತನಾಡಿ ತೇರದಾಳ ಮತಕ್ಷೇತ್ರದ ಶಾಸಕರು ಹಾಗೂ ಸಚಿವೆಯಾಗಿದ ಉಮಾಶ್ರೀ ಯವರು ನೇಕಾರ ಕ್ಷೇತ್ರಕ್ಕೆ ನೂರಾರು ಯೋಜನೆಗಳನ್ನು ತಂದಿದ್ದಾರೆ.
1.25 ವಿದ್ಯುತ್ ಸಬ್ಸಿಡಿ. ಬನಹಟ್ಟಿ ನೂಲಿನ ಗಿರಣಿಗೆ 2015 ರಲ್ಲಿ 3.45 ಕೋಟಿ ರೂ.ಉಳಿದಿರುವ ಬಾಕಿ ಮೊತ್ತ ಬಿಡುಗಡೆ. ನೇಕಾರರಿಗೆ ಸಾಲ ಮತ್ತು ಬಡ್ಡಿ ಮನ್ನಾದ ಉಳಿದಿರುವ ಮೊತ್ತ ಹೀಗೇ ಅನೇಕ ಯೋಜನೆಗಳನ್ನು ತಂದಿದ್ದಾರೆ. ಅವರ ಮೇಲೆ ಇಲ್ಲದ -ಸಲ್ಲದ ಆರೋಪ ಮಾಡುವದು ಸರಿಯಲ್ಲ ಸುಳ್ಳು ಆರೋಪ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಪಕ್ಷದಿಂದ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡರಾದ ನೀಲಕಂಠ ಮುತ್ತೂರ ಮಾತನಾಡಿ ತೇರದಾಳ ಮತಕ್ಷೇತ್ರದಲ್ಲಿ ಮತದಾರರಿಗೆ ಗೊಂದಲಗಳನ್ನು ಹುಟ್ಟಿಸಿ. ನಿನ್ನೆ ಮಾಡಿರುವ ಘಟನೆಗೆ ಪಕ್ಷದಿಂದ ಖಂಡನಿಯ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ ಕ್ಷೇತ್ರದಲ್ಲಿ ಪ್ರತಿಯೊಂದು ಮತದಾರರ ಮನೆಗಳಿಗೆ ಭೇಟಿ ನೀಡಿ. ಅವರ ಆರೋಗ್ಯ ವಿಚಾರಿಸಿ. ಅವರ ಕಷ್ಟಗಳಿಗೆ ಸ್ಪಂದಿಸುತ್ತಾ. ಕೆಲವೊಂದು ಕುಟುಂಬಗಳಿಗೆ ಸಹಾಯ ಸಹಕಾರ ನೀಡುತ್ತಾ ಬಂದಿರುವ ಉಮಾಶ್ರೀಯವರ ಮೇಲೆ ಆರೋಪಿಸುವುದು ಸರಿಯಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಚನ್ನವೀರಪ್ಪ ಹಾದಿಮನಿ. ಲಕ್ಷ್ಮಣ್ ದೇಸಾರಹಟ್ಟಿ.ಮಲ್ಲಪ್ಪ ಸಿಂಗಾಡಿ. ಈಶ್ವರ ಚಮಕೇರಿ. ಸತ್ತೆಪ್ಪ ಮಗದುಮ. ಶ್ರೀಶೈಲ ಮೇನಿ. ಸಂಜು ಜೋತಾವರ. ಚಿದಾನಂದ್ ಘಾಳಿ. ಬಸವರಾಜ ಗುಡೋಡಗಿ. ಸುನೀಲಗೌಡ ಪಾಟೀಲ. ಬಲವಂತಗೌಡ ಪಾಟೀಲ. ಮಾರುತಿ ಸೋರಗಾಂವಿ. ರಾಹುಲ್ ಕಲಾಲ. ಓಂಪ್ರಕಾಶ್ ಮನಗೂಳಿ. ನಸೀಮ್ ಮೊಕಾಶಿ. ಹಾರೂನ್ ಬೇವೂರ. ಅರವಿಂದ್ ಮನ್ನಿಕೇರಿ. ಕಿರಣ ಕರಲಟ್ಟಿ. ರೇಣುಕಾ ಮಡ್ಡಿಮನಿ ವಿದ್ಯಾ ಬಿಳ್ಳೂರ. ಆಯೇಷಾ ಫನಿಬಂದ. ಮಹಾನಂದಾ ದೊಡ್ಡಮನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ