ಗುವಾಹಟಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೈರ್ಬುಯ 2023ರ ಆವೃತ್ತಿಯಲ್ಲಿನ ಆರಂಭಿಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ರಾಜಸ್ಥಾನ ರಾಯಲ್ಸ್ ಆತ್ಮವಿಶ್ವಾಸದ ಅಲೆಯಲ್ಲಿದೆ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧವೂ ಅಂಥದ್ದೇ ಅಧಿಕಾರಯುತ ಗೆಲುವನ್ನು ಪಿಂಕ್ ಫ್ರಾಂಚೈಸಿ ಎದುರು ನೋಡುತ್ತಿದೆ. ಈ ಹೈ-ವೋಲ್ಟೇಜ್ ಪಂದ್ಯವು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 5) ನಡೆಯಲಿದೆ. ಅಂದಹಾಗೆ ಪಂಜಾಬ್ ಕಿಂಗ್ಸ್ ಕೂಡ ಐಪಿಎಲ್ 2023 ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ತನ್ನ ಮೊದಲ ಪಂದ್ಯದಲ್ಲಿ ಜಿದ್ದಾ ಜಿದ್ದಿನ ಪೈಪೋಟಿ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಮಳೆ-ಬಾಧಿತ ಹಣಾಹಣಿಯಲ್ಲಿ ಡಕ್ವರ್ತ್-ಲೂಯಿಸ್ ನಿಯಮದನ್ವಯ 7 ರನ್ಗಳ ರೋಚಕ ಜಯ ದಕ್ಕಿಸಿಕೊಂಡಿತ್ತು.
ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ಗಳು 203 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸುವ ಮೂಲಕ ಶ್ರೇಷ್ಠ ಲಯದಲ್ಲಿರುವ ಸಂದೇಶ ರವಾನಿಸಿದ್ದಾರೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಸ್ಪೋಟಕ ಅರ್ಧಶತಕ ಬಾರಿಸಿ ತಂಡದ ಬೃಹ್ ಮೊತ್ತಕ್ಕೆ ಕಾರಣರಾದರು. ಬಳಿಕ ಬೌಕಲಿಂಗ್ನಲ್ಲಿ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ನಾಲ್ಕು ವಿಕೆಟ್ಗಳನ್ನು ಪಡೆದು ಗೆಲುವಿಗೆ ಬಲವಾಗಿದ್ದರು.
ಸ್ಟಾರ್ ಓಪನ್ ಶಿಖರ್ ಧವನ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ಕೂಡ ತನ್ನ ಬ್ಯಾಟಿಂಗ್ ಸಾಮರ್ಥ್ಯ ಅನಾವರಣ ಪಡಿಸಿದೆ. ಭಾನುಕ ರಾಜಪಕ್ಷ 32 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ನಾಯಕ ಧವನ್ ನಿರ್ಣಾಯಕ 40 ರನ್ ಚಚ್ಚಿದ್ದರು. ತಂಡ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ಗಳೊಂದಿಗೆ ಶಿಸ್ತಿನ ದಾಳಿ ಸಂಘಟಿಸಿ ಕೆಕೆಆರ್ ಬ್ಯಾಟರ್ಗಳ ಅಬ್ಬರಕ್ಕೆ ಬ್ರೇಕ್ ಹಾಕಿದ್ದರು. ಹೀಗಾಗಿ ಬ್ಯಾಟಿಂಗ್ ದೈತ್ಯ ತಂಡಗಳ ನಡುವಣ ಜಟಾಪಟಿ ಸಾಕಷ್ಟು ಕುತೂಹಲವನ್ನೇ ಕೆರಳಿಸಿದೆ. ಕಳೆದ ಕೆಲ ಮುಖಾಮುಖಿಗಳಲ್ಲಿ ಇತ್ತಂಡಗಳ ನಡುವೆ ಹೈ-ಸ್ಕೋರಿಂಗ್ ಜಟಾಪಟಿ ಮೂಡಿಬಂದಿದೆ.
ಹೀಗಾಗಿ ಎರಡೂ ತಂಡಗಳ ನಡುವಣ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ವಿವರವನ್ನು ಇಲ್ಲಿ ನೀಡಲಾಗಿದೆ.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ XI
01. ಜೋಸ್ ಬಟ್ಲರ್ (ಓಪನರ್)
02. ಯಶಸ್ವಿ ಜೈಸ್ವಾಲ್ (ಓಪನರ್)
03. ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ಕೀಪರ್)
04. ದೇವದತ್ ಪಡಿಕ್ಕಲ್ (ಬ್ಯಾಟ್ಸ್ಮನ್)
ಪಂಜಾಬ್ ಕಿಂಗ್ಸ್ ಸಂಭಾವ್ಯ XI
01. ಪ್ರಭಸಿಮ್ರನ್ ಸಿಂಗ್ (ವಿಕೆಟ್ಕೀಪರ್/ ಓಪನರ್)
02. ಶಿಖರ್ ಧವನ್ (ನಾಯಕ/ ಓಪನರ್)
- ಭಾನುಕಾ ರಾಜಪಕ್ಷ (ಬ್ಯಾಟ್ಸ್ಮನ್)
04. ಜಿತೇಶ್ ಶರ್ಮಾ (ಬ್ಯಾಟ್ಸ್ಮನ್)
05. ಸಿಕಂದರ್ ರಾಜಾ (ಆಲ್ರೌಂಡರ್)
06. ಸ್ಯಾಮ್ ಕರ್ರನ್ (ಆಲ್ರೌಂಡರ್)
07. ಶಾರುಖ್ ಖಾನ್ (ಆಲ್ರೌಂಡರ್)
08. ನಾಥನ್ ಎಲ್ಲಿಸ್ (ವೇಗದ ಬೌಲರ್)
09. ಹರ್ಪ್ರೀತ್ ಬ್ರಾರ್ (ಸ್ಪಿನ್ನರ್)
10. ರಾಹುಲ್ ಚಹರ್ (ಲೆಗ್ ಸ್ಪಿನ್ನರ್)
11. ಅರ್ಷದೀಪ್ ಸಿಂಗ್ (ಎಡಗೈ ವೇಗಿ)
ಲೈವ್ ಟೆಲಿಕಾಸ್ಟ್
ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಟೆಲಿವಿಷನ್ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯದ ನೇರ ಪ್ರಸಾರದ ಹಕ್ಕನ್ನು ಹೊಂದಿದೆ.
ಲೈವ್ ಸ್ಟ್ರೀಮಿಂಗ್
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಜಿಯೋ ಸಿನಿಮಾ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮ್ ಪಡೆಯಬಹುದು
ಪಂದ್ಯದ ವಿವರ
RR vs PBKS ಪಂದ್ಯವು ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 5 ರಂದು) ರಾತ್ರಿ 7:30ಕ್ಕೆ (ಭಾರತೀಯ ಕಾಲಮಾನ) ಶುರುವಾಗಲಿದೆ.