ಬೆಂಗಳೂರು: ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಮಹಾಕುಂಭಮೇಳ ಭಕ್ತರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದಿನ ಕಳೆದಂತೆ ಭಕ್ತ ಸಾಗರ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಇದೀಗ ಪರಿಷತ್ ಶಾಸಕ ಟಿಎ ಶರವಣ ಅವರು ಕೂಡ ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ಭೇಟಿ ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾ ಕುಂಭಮೇಳದಲ್ಲಿ ಸಂಚರಿಸಿದ ಪರಿಷತ್ ಶಾಸಕ ಟಿಎ ಶರವಣ ಅವರು ವಿನಯ್ ಗುರೂಜಿ ಅವರ ಜೊತೆ ಪುಣ್ಯಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಫೆಬ್ರವರಿ 26ರಂದು ಈ ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 56 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಫೆಬ್ರವರಿ 26 ಮಹಾಶಿವರಾತ್ರಿ ಇರೋ ಕಾರಣ ಮಹಾ ಕುಂಭಮೇಳಕ್ಕೆ ಭಕ್ತ ಸಾಗರ ಹರಿದು ಬರುವ ಸಾಧ್ಯತೆ ಇದೆ. ಈಗಾಗ್ಲೆ ಕಾಲ್ತುಳಿತದಂತಹ ಕಹಿ ಘಟನೆ ಅನುಭವಿಸಿ, ನಾನಾ ಟೀಕೆಗಳಿಗೆ ಗುರಿಯಾಗಿರೋ ಉತ್ತರ ಪ್ರದೇಶದ ಸರ್ಕಾರ ಅನೇಕ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿ ಕೊಳ್ಳೋದಕ್ಕೆ ಸಜ್ಜಾಗಿದೆ.
