ಬೆಂಗಳೂರು:- ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ಹೊರ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಬೆಟ್ಟಿಂಗ್ಆಪ್ ಗಳಿಂದ ಯುವಕರು ಬಲಿ ಆಗ್ತಿದ್ದಾರೆ.
ಬಾಳಿ ಬದುಕಬೇಕಿದ್ದ ನೂರಾರು ಜನ ಡ್ರಗ್ಸ್ ಮಾದರಿಯಲ್ಲಿ ಅಡಿಟ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಕೊಡುವ ಈ ಆಪ್ ಗಳನ್ನ ಈ ಕೂಡಲೇ ನಿಷೇಧ ಆಗ್ಬೇಕು ಎಂದು ಕ ರ ವೇ ಶಿವರಾಮೇಗೌಡ್ರ ಬಣ ದ ಕಾರ್ಯಕರ್ತರು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ.
ದುಡ್ಡಿಗಾಗಿ ಕಳ್ಳತನ, ಸುಲಿಗೆ, ದರೋಡೆಗಳು ಜಾಸ್ತಿ ಆಗ್ತಿದೆ.ಈಗಿನ ನಟ ನಟಿಯರಿಗೆ ಮಾನವೀಯತೆಗಿಂತ ದುಡ್ಡು ಮುಖ್ಯ ಆಗಿದೆ . ಡಾ, ರಾಜಕುಮಾರ್ ಚಿತ್ರ ನೋಡಿ ಜೀವನ ಬದಲಿಸಿಕೊಂಡ ಅದೆಷ್ಟೋ ನಿದರ್ಶನ ಇದೆ. ಆದ್ರೆ ಈಗಿನ ನಟರು ದುಡ್ಡು ಕೊಟ್ರೆ ಎನ್ ಬೇಕಾದ್ರು ಪ್ರಮೋಟ್ ಮಾಡ್ತಾರೆ. ಎಂದು ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲಹಂಕಗುರು ಮತ್ತು ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗಿದೆ.
ಯಲಹಂಕ ತಾಲ್ಲೂಕು ದಂಡಾಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಪತ್ರ ಕೊಟ್ಟಿದ್ದಾರೆ.
