ಬೀದರ್ : ವಿದ್ಯುತ್ ತಗುಲಿ ಸಾವನಪ್ಪಿದ ರೈತರ ಕುಟುಂಬಗಳಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಪರಿಹಾರ ಚೆಕ್ ವಿತರಿಸಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ವಿವಿಧೆಡೆ ವಿದ್ಯುತ್ ತಗುಲಿ ಮೃತಪಟ್ಟ ರೈತರ ಎರಡು ಕುಟುಂಬದ ಸಂತ್ರಸ್ತರಿಗೆ ತಲಾ 2 ಲಕ್ಷ ಸೇರಿ ಒಟ್ಟು 4 ಲಕ್ಷ ರೂ.
ಚೆಕ್ ವಿತರಣೆ ಮಾಡಿದರು. ಇದು ಅಲ್ಲದೇ ವಿದ್ಯುತ್ ಅವಘಡದಲ್ಲಿ ಮೃತ ಪಟ್ಟ ಎರಡು ಎತ್ತುಗಳ ಮಾಲೀಕರಿಗೆ 1 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.
ಬೀದರ್ ನಗರದ ಶಾಸಕರ ಕಚೇರಿಯಲ್ಲಿ ಜೆಸ್ಕಾಂ ವತಿಯಿಂದ ಶಾಸಕರು ಸಂತ್ರಸ್ತರಿಗೆ ಚೆಕ್ ವಿತರಣೆ ಮಾಡಿದರು. ಬೀದರ್ ದಕ್ಷಿಣ ಕ್ಷೇತ್ರದ ಮರ್ಜಾಪುರ ಎಂ ಗ್ರಾಮದ ಪ್ರಕಾಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರೆ, ಯದಲಾಪುರ ಗ್ರಾಮದ ಜೈ ಭೀಮ ತಮ್ಮ ಮನೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು.
ಬಗದಲ್ ತಾಂಡದ ರೈತ ಹರಿಲಾಲ ಅವರಿಗೆ ಸೇರಿದ ಎತ್ತುಗಳು ಜಮೀನಿನಲ್ಲಿ ಮೇಯುತ್ತಿರುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಎತ್ತುಗಳ ಮಾಲೀಕರಿಗೆ 1 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಯಿತು. ಈ ವೇಳೆ ಸೆಸ್ಕಾಂ ಇಇ ರಮೇಶ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷರಾದ ಗುರುನಾಥ ರಾಜಗೀರಾ, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೋಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
