ರಾಮನಗರ : ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಐದು ದಿನಗಳ ಮುಂಚೆಯೇ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರನ ದರ್ಶನ ಪಡೆಯಲು ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಾರೆ. ಮೊದಲಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದ ಮಾರ್ಗವಾಗಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದರ ಮೂಲಕ ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸುವುದು ಶತಮಾನ ವರ್ಷಗಳಿಂದಲೂ ನಡೆದು ಬಂದಿರುವ ಪದ್ಧತಿಯಾಗಿದೆ.
ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲೆ ಮಾದಪ್ಪನ ದರ್ಶನಕ್ಕೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಷಾಂತರ ಭಕ್ತಾದಿಗಳು ಹಲವು ವರ್ಷಗಳಿಂದ ಪಾದಯಾತ್ರೆ ಮಾಡುವ ರೂಢಿಯಲ್ಲಿದ್ದು, ಕೆಲವು ಭಕ್ತಾದಿಗಳು ತಮ್ಮ ಮನೆಗಳಿಂದಲೇ ಮಲೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದರೆ 90 ಭಾಗ ಲಕ್ಷಾಂತರ ಭಕ್ತಾದಿಗಳು ಕನಕಪುರ ತಾಲೂಕಿನ ಏಳಗಳ್ಳಿಗೆ ವಾಹನಗಳ ಮೂಲಕ ತೆರಳಿ ತಾಯಿ ಮುದ್ದಮನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಬೇಡಿ ಭೋಜನ ಸೇವಿಸುವುದರ ಮೂಲಕ ಪಾದಯಾತ್ರೆ ಮುಂದುವರಿಸುವುದು ರೂಢಿಯಲ್ಲಿದೆ.
ಇನ್ನೂ ಭಕ್ತಾದಿಗಳು ಪಾದಯಾತ್ರೆ ನಡೆಸುವ ಮಾರ್ಗದಲ್ಲಿ ಕನಕಪುರ ತಾಲೂಕಿನ ಏಳಗಳ್ಳಿ ಮತ್ತು ಮಾದಪ್ಪನ ಬೆಟ್ಟದ ನಡುವೆ ಕಾವೇರಿ ನದಿ ಹಾದು ಹೋಗುವುದರಿಂದ ಪಾದಯಾತ್ರೆ ನಡೆಸುವ ಭಕ್ತಾದಿಗಳು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನದಿಯನ್ನು ಕಾಲ್ನಡಿಗೆಯಲ್ಲಿ ದಾಟುವುದರ ಮೂಲಕ ಭಕ್ತಾದಿಗಳು ಪ್ರಯಾಣ ಮುಂದುವರಿಸುವುದು ಪದ್ಧತಿಯಾಗಿದೆ.
ಮಾದಪ್ಪದ ಪಾದಯಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಕಾವೇರಿ ನದಿಯನ್ನು ದಾಟುವ ಹಿನ್ನೆಲೆ ಯಾವುದೇ ಅಹಿತರ ಘಟನೆಗಳು ಸಂಭವಿಸಿದಂತೆ ರಾಮನಗರ ಜಿಲ್ಲಾಡಳಿತ ಶಿಸ್ತು ಕ್ರಮಗಳನ್ನು ಕೈಗೊಂಡಿದ್ದು, ಭಕ್ತಾದಿಗಳು ಕಾವೇರಿ ನದಿಯನ್ನು ದಾಟಲು ನದಿಯ ಅಡ್ಡಲಾಗಿ ಮಿಲಿಟರಿ ಸ್ಟೈಲ್ ನಲ್ಲಿ ಹಗ್ಗವನ್ನು ನಿರ್ಮಿಸಿದ್ದು 20ಕ್ಕೂ ಹೆಚ್ಚು ತೆಪ್ಪಗಳು, ಐದು ಬೋಟ್ಗಳು ಮತ್ತು ನುರಿತ ಈಜುಗಾರರನ್ನು ನೇಮಿಸಲಾಗಿದೆ. ಭಕ್ತಾದಿಗಳನ್ನು ನಿಯಂತ್ರಿಸಲು ಸುಮಾರು ನೂರಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್ ನೀಡಲಾಗಿದೆ. ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಕೂಡ ಬರುವ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಯಾಗದಂತೆ ಮೂಲ ಭೂತ ಸೌಕರ್ಯ ಒದಗಿಸುವಂತೆ ರಾಮನಗರ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
