ಪ್ರಯಾಗ್ ರಾಜ್:– 144 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟಿ-ಕೋಟಿ ಭಕಾಧಿಗಳು ಆಗಮಿತ್ತಿದ್ದಾರೆ. ಅಲ್ಲದೇ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ.
ಈ ಮಹಾ ಕುಂಭಮೇಳ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ.ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸುಮಾರು 50 ಕೋಟಿ ಜನರು ಈಗಾಗಲೇ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಗೆ ಬಂದ ಅನೇಕ ಸಂತರು, ಭಕ್ತರು, ಸನ್ಯಾಸಿಗಳು ಮತ್ತು ಬಾಬಾಗಳು ಅಘೋರಿಗಳು ಪವಿತ್ರ ನದಿಯಲ್ಲಿ ಸ್ನಾನ ಮಾಡಿದರು. ಆದಾಗ್ಯೂ, ಪವಿತ್ರ ಗಂಗಾ ನದಿಯಲ್ಲಿ ಜಲ ಮಾಲಿನ್ಯ ಮತ್ತು ಸ್ವಚ್ಛತೆಯ ಬಗ್ಗೆ ಕಳವಳ ಉಂಟಾಗಿದೆ.
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ತೀವ್ರವಾದ ಶ್ವಾಸಕೋಶದ ಸೋಂಕು ಉಂಟಾದ ರೋಗಿಗೆ ಚಿಕಿತ್ಸೆ ನೀಡಿದ ಡಾ. ದೀಪಶಿಖಾ ಘೋಷ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜ್ಞಾನವನ್ನು ಕೀಳಾಗಿ ನೋಡಬೇಡಿ. ಸೋಂಕಿನಿಂದಾಗಿ ರೋಗಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
