ಬೆಂಗಳೂರು:- ಫೋನ್ ಪೇ ಮೂಲಕ ಲಂಚ ಪಡೆದ ಲೇಡಿ ಇನ್ಸಪೆಕ್ಟರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಜರುಗಿದೆ.
ಡಿಸಿಆರ್ ಬಿ ಪೊಲೀಸ್ ಇನ್ಸ್ಪೆಕ್ಟರ್ ಗೀತಾ ಲೋಕಾಬಲೆಗೆ ಬಿದ್ದ ಅಧಿಕಾರಿ. ಸ್ಲಂ ಬೋರ್ಡ್ ನಲ್ಲಿ ಮನೆ ಪಡೆಯಲು ಜಾತಿ ಪ್ರಮಾಣಪತ್ರ ಪಡೆಯೋಕೆ ಲೋಕೇಶ್ ಎಂಬ ವ್ಯಕ್ತಿ ಅರ್ಜಿ ಹಾಕಿದ್ದ. ಈ ವೇಳೆ ದಾಖಲೆ ನೀಡಲು ವ್ಯಕ್ತಿಯಿಂದ 25 ಸಾವಿರ ಲಂಚಕ್ಕೆ ಗೀತಾ ಬೇಡಿಕೆ ಇಟ್ಟಿದ್ದರು.
ಈ ವೇಳೆ ಮುಂಗಡವಾಗಿ ಹತ್ತು ಸಾವಿರ ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆದ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಗೆ ಲೋಕೇಶ್ ದೂರು ನೀಡಿದ್ದರು. ಮಾಹಿತಿ ಆಧರಿಸಿ ಇನ್ಸಪೆಕ್ಟರ್ ರನ್ನು ಲೋಕಾ ಟೀಮ್ ಲಾಕ್ ಮಾಡಿದೆ
