ಪ್ರೇತವೆಂದರೆ ಪ್ರ ಇತಃ ಎಂದು ಪದವಿಭಾಗ. ಪ್ರ ಎಂದರೆ ಪ್ರೇರಣೆ ಎಂದರ್ಥ. ಅಂದರೆ ಕಳುಹಿಸಲ್ಪಟ್ಟದ್ದು ಎಂದು ಶಬ್ದಾರ್ಥ. ಇತಃ ಎಂದರೆ ಇಲ್ಲಿಂದ ಎಂದು ಅರ್ಥ. ಹಾಗಾದರೆ ಪ್ರೇತ ಶಬ್ದದ ಅರ್ಥ ಇಲ್ಲಿಂದ ಕಳುಹಿಸಲ್ಪಟ್ಟದ್ದು ಎಂದು. ಇಲ್ಲಿಂದ ಕಳುಹಿಸಲ್ಪಟ್ಟ ನಮ್ಮ ಪಿತೃಗಳು ಎಂದು. ಅರ್ಥ.
ಇಲ್ಲಿ ಮರಣ ಹೊಂದಿದ ಪಿತೃಗಳ ಕಾರ್ಯವನ್ನು ಸರಿಯಾಗಿ ಮಾಡಿ, ವಿಧಿಯ ಪ್ರಕಾರ ವ್ರತದಿಂದ ಇದ್ದರೆ ಹಿರಿಯರ ಜೀವಾತ್ಮ ಅವರ ಕರ್ಮಕ್ಕನುಗುಣವಾಗಿ ಪರಂಧಾಮವನ್ನು ಹೊಂದುತ್ತದೆ. ಸರಿಯಾದ ರೀತಿಯಲ್ಲಿ ಕಾರ್ಯವನ್ನು ಮಾಡದೇ ಇದ್ದ ಪಕ್ಷದಲ್ಲಿ ಪರಂಧಾಮ ಸೇರಲಾಗದೇ ಪತಿತವಾಗುತ್ತದೆ. ಪತಿತವಾದ ಜೀವಾತ್ಮ ತನ್ನ ಕಾರ್ಯವನ್ನು ಮಾಡಿ ಎಂದು ತಮ್ಮ ವಂಶಸ್ಥರನ್ನು ಉಪದ್ರವಿಸಿ ಎಚ್ಚರಿಸುವುದು ಸಹಜ.
ಮರಣ ಹೊಂದುವುದು ಕೇವಲ ದೇಹ ಮಾತ್ರ. ಅದರಲ್ಲಿರುವ ಜೀವಾತ್ಮ ಇನ್ನೊಂಡೆಗೆ ಸೇರುವಲ್ಲಿಯ ತನಕದ ಸ್ಥಿತಿಯೇ ಪ್ರೇತ. ಅದರ ವಿಮೋಚನೆ ಸರಿಯಾಗಿ ಆಗಲಿಲ್ಲವೆಂದರೆ ಕಿರಿ ಕಿರಿ ಉಂಟಾಗಿ ಬಾಧೆಯ ರೀತಿ ಕಾಡುತ್ತದೆ. ಆದ್ದರಿಂದ ಹಿರಿಯರ ಕಾರ್ಯವನ್ನು ಶ್ರದ್ಧೆಯಿಂದ ಕ್ರಮವಾಗಿ ವ್ರತನಿಷ್ಠನಾಗಿ ಮಾಡಬೇಕು ಎಂದು ಹೇಳುವುದು. ಈ ಕಾರಣದಿಂದಲೇ ಪಿತೃಕಾರ್ಯಕ್ಕೆ ಶ್ರಾದ್ಧ ಎನ್ನುವರು.
ಘಟಂ ಪ್ರೇತಸ್ಯ ನಿರ್ವಪೇತ್ ಎಂದು ಗರುಡ ಪುರಾಣದಲ್ಲಿ ಹೇಳಿದೆ . ಅಂದರೆ ಪ್ರೇತದ ಕುರಿತಾಗಿ ಒಂದು ಘಟದ ಸ್ಥಾಪನೆಯನ್ನು ಮಾಡಬೇಕು ಎಂದರ್ಥ. ಅದರ ಸ್ವರೂಪ ಮತ್ತು ಯಾವ ರೀತಿ ಕೊಡಬೇಕು ಎಂಬುದರ ಕುರಿತಾಗಿ ಪುರಾಣವು ಈ ರೀತಿ ಹೇಳುತ್ತದೆ. –
ಘಟಂ ಪ್ರೇತ ವಿಮುಕ್ತಿಕಮ್ ಪ್ರೇತದ ಪ್ರೇತತ್ವ ಕಳಚಿ ಮುಕ್ತಿಯೆಂಬ ಪರಂಧಾಮವನ್ನು ಸೇರುವ ಸಲುವಾಗಿ ಈ ಘಟ ಸ್ಥಾಪನೆ ಮಾಡಬೇಕು ಮತ್ತು ಆಚಾರವಂತ ಧರ್ಮಿಷ್ಠನಿಗೆ ಇದರ ದಾನ ಮಾಡಬೇಕು. ಇದಕ್ಕೆ ಕ್ರಮವಾಗಿ ಬ್ರಹ್ಮನನ್ನು ಘಟದ ಮೂಲಕ್ಕೆ ಆವಾಹನೆ ಮಾಡಿ ಪೂಜಿಸಬೇಕು, ಮಧ್ಯ ಭಾಗಕ್ಕೆ ರುದ್ರನನ್ನು, ಮುಖ ಭಾಗಕ್ಕೆ ಅಥವಾ ಮೇಲ್ಭಾಗಕ್ಕೆ ವಿಷ್ಣುವನ್ನು ಅವಾಹನೆ ಮಾಡಿ ಪೂಜಿಸಬೇಕು. ಪೂರ್ವಾದಿ ದಿಕ್ಕುಗಳಲ್ಲಿ ಇಂದ್ರಾದಿ ದಿಕ್ಪಾಲರನ್ನು ಆವಾಹಿಸಿ ಪೂಜಿಸುವುದು. ಈ ಕಲಶವು ಚಿನ್ನ / ಬೆಳ್ಳಿ / ತಾಮ್ರ ಯಾವುದಾದರೂ ಒಂದರಿಂದ ಮಾಡಲ್ಪಡಬೇಕು. ಉತ್ತಮವಾದಂತೆ ಸಾಫಲ್ಯ ಅಧಿಕ. ಇದರಲ್ಲಿ ಹಾಲು ಮತ್ತು ತುಪ್ಪವನ್ನಿಟ್ಟು ಪೂಜಿಸಿ ದಾನ ಮಾಡಬೇಕು. ಈ ಪ್ರೇತಘಟದ ದಾನವು ಎಲ್ಲಾ ಅಶುಭಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ. ಈ ದಾನವನ್ನು ಮರಣಪಟ್ಟ ಹತ್ತನೇ ಅಥವಾ ಹನ್ನೊಂದನೇಯ ದಿನ ಸತ್ಪಾತ್ರರಿಗೆ ನೀಡಬೇಕು. ಇಂದರಿಂದ ನಾವು ಕಳುಹಿಸುವ ನಮ್ಮ ಹಿರಿಯ ಜೀವಾತ್ಮಕ್ಕೆ ಮತ್ತು ಇಲ್ಲಿರುವ ನಮಗೆ ಕ್ಷೇಮ ಮತ್ತು ಮಂಗಲವಾಗುತ್ತದೆ.
ಪ್ರೇತ ಬಾಧೆ ಎಲ್ಲಿಂದ ಬಂದಿದೆ ಹಾಗೂ ಯಾರಲ್ಲಿ ಯಾರ್ ಪ್ರೇತಾತ್ಮ ಸೇರಿ ಕಾಡ್ತಿದೆ ಎಂದು ತಿಳಿಯಲು ಕುಂಕುಮ ಪ್ರಶ್ನೆ ಸಹಕಾರಿ.
ಕುಂಕುಮ ಪ್ರಶ್ನೆ ಹಾಕಿದಾಗ ತೀರ್ಕೊಂಡಿದ್ದವರ ಮುಖ ಅಂಗೈಯಲ್ಲಿ ಹಾಕಿದ ಕುಂಕುಮದಲ್ಲಿ ಕಾಣಿಸುತ್ತೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ನಾಗಯೋಗಿ ಪ್ರಭಾಕರ ಪ್ರಭು
7892178039
ಹನುಮಂತನಗರ, ಬೆಂಗಳೂರು.
