144 ವರ್ಷಗಳ ಬಳಿಕ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇನ್ನೂ ಕೆಲವೇ ದಿನಗಳ ಮಾತ್ರವೇ ಭಾಕಿ ಇದೆ. ಈಗಾಗಲೇ ಕೋಟ್ಯಾಂತರ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತ ವ್ಯವಸ್ಥೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. 2019ರಲ್ಲಿ ನಡೆದ ಕುಂಭ ಮೇಳದಲ್ಲಿ ಜನರು ಸಂಕಷ್ಟ ಅನುಭವಿಸಿದ್ದು ನನಗೆ ನೆನಪಿದೆ. ಈ ಬಾರಿ ಅನೇಕ ಗಣ್ಯರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಅಂಬಾನಿ, ಅದಾನಿ ಕುಟುಂಬದವರು ಹಾಗೂ ಅನೇಕ ದೊಡ್ಡ ದೊಡ್ಡ ನಟರು ಭೇಟಿ ನೀಡಿದ್ದಾರೆ. ಪೊಲೀಸರು ಹಾಗೂ ಸೇವಕರಿಗೆ ಕೈಮಗಿದು ಧನ್ಯವಾದ ಹೇಳುತ್ತಿದ್ದೇನೆ ಎಂದರು.
ಈ ಮೊದಲು ಮಹಾ ಕುಂಭಮೇಳಕ್ಕೆ ಬಾಲಿವುಡ್ನ ಸೊನಾಲಿ ಬೆಂದ್ರೆ, ವಿಕ್ಕಿ ಕೌಶಲ್, ತಮನ್ನ ಭಾಟಿಯಾ, ರಾಜ್ಕುಮಾರ್ ರಾವ್, ಹೇಮ ಮಾಲಿನಿ ಹಾಗೂ ಇನ್ನಿತರ ಸ್ಟಾರ್ ನಟರು ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದರು. ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳಕ್ಕೆ ಕೆಲವೇ ದಿನ ಬಾಕಿಯಿರುವಾಗ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದಾರೆ.
