ಬೆಂಗಳೂರು: ಸ್ಯಾಂಡಲ್ ವುಡ್ ನ ನಟನಿಗೆ ಧಮ್ಕಿ ಪ್ರಕರಣ ಸಂಬಂಧ ಒಳಸಂಚು ನಡೆದಿದೆ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗುತ್ತಲೇ ಇದೆ. ಚಿತ್ರರಂಗದ ಒಬ್ಬ ವ್ಯಕ್ತಿ ಈ ಹಿಂದಿನ ಕಿಂಗ್ ಪಿನ್ ಎಂಬ ಶಂಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಸಿಸಿಬಿಯ ಕಣ್ಣು ಯಾರ ಮೇಲಿದೆ ಗೊತ್ತಾ..? ಡೀಟೇಲ್ಸ್ ಇಲ್ಲಿದೆ.
ಸ್ವತಃ ನಟ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರು.ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭಿರತೆಯನ್ನ ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಮಂಜುನಾಥ್ ಮೂಲಕ ದೂರು ನೀಡಿದ್ರು. ಯಸ್ ಬೆದರಿಕೆ ಪತ್ರ ಬಂದಿದ್ದು ಎರಡನೇ ಬಾರಿ. ಮೊದಲ ಬಾರಿಯೋ ಒಮ್ಮೆ ಪತ್ರ ಕಳಿಸಿದ್ದ ಆಗಂತುಕ. ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ ,ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದ ಸದ್ಯ ಈ ಪತ್ರ ಗಂಭೀರತೆಯನ್ನ ಪಡೆದುಕೊಂಡಿದೆ.
ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿತ್ತು. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನ ಕಲೆ ಹಾಕೋದಕ್ಕೆ ಯತ್ನಿಸಿದ್ದರು. ಆದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್ .. ಯಸ್ ಸುದೀಪ್ ಮನೆಗೆ ಬಂದ ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿತ್ತು. ಹೀಗಾಗಿ ಆ ಪತ್ರವನ್ನ ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.
ಇನ್ನು ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದರು. ಕೆಲವೊಂದು ಸಾಂಧರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿತ್ತು. ಇವೆಲ್ಲ ವರದಿಯನ್ನ ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದೆ. ಇನ್ನು ಈ ಕಾರು ಚಾಲಕನನ್ನ ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನ ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ. ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿ. ಕೈ ಬರಹ ಪತ್ರವನ್ನ ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನ ಪೋಸ್ಟ್ ಮಾಡಲಾಗಿದೆ. ಇನ್ನು ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸಿರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿದೆ.
ಇನ್ನು ಸಿಸಿಬಿಯ ಸೈಬರ್ ವಿಂಗ್ ಕೂಡ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನ ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕಷ್ಟೆ ಅಸಲಿ ಸಂಗತಿ ಹೊರ ಬೀಳಲಿದೆ