ಬೆಂಗಳೂರು: ಮಧ್ಯರಾತ್ರಿಯ ಸಮಯ.ಖಾಲಿಜಾಗದಲ್ಲಿ ಕಾರೊಂದು ಧಗಧಗಿಸಿತ್ತು.ಕಾರಲ್ಲಿ ಮಲಗಿದ ವ್ಯಕ್ತಿಯ ದೇಹ ಸುಟ್ಟು ಕರಕಲಾಗಿತ್ತು. ವ್ಯಕ್ತಿಯ ಗುರುತು ಪತ್ತೆಯಾಗಿದ್ದು..ಮಾತ್ರ ರೋಚಕ ಅರ್ಧ ಸುಟ್ಟಿದ್ದ ಚಡ್ಡಿ ಸುಳಿವು ಕೊಟ್ಟಿದೆ..ಅಲ್ಲದೇ ಇಷ್ಟೆಲ್ಲ ಅವಘಡಕ್ಕೆ ಸೊಳ್ಳೆ ಬತ್ತಿ ಕಾರಣ ಆಯ್ತು ಅನ್ನೋದೆ ವಿಪರ್ಯಾಸ.
ಬೆಂಕಿಯ ಕಿಡಿಯೊಂದು .ನೋಡ ನೋಡ್ತಿದ್ದಂತೆ ಜ್ವಾಲೆಯಾಗಿ ಧಗಿಧಗಿಸಿತ್ತು..ರಾತ್ರಿ ಕಳೆದು ಬೆಳಗಾಗೋದರೊಳಗೆ ಹೀಗೆ ಓಡಾಡ್ತಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದ. .ಅರ್ಧ ಚಡ್ಡಿ ನೋಡಿ ಕುಟುಂಬಸ್ಥರಿಗೆ ಮೃತಪಟ್ಟವನು ವಿನೋದ ಎಂಬುದಾಗಿ ಗೊತ್ತಾಗಿದೆ
ಹೌದು ಮಾರ್ಚ್ 29 ರ ಮುಂಜಾನೆ 1 ಗಂಟೆಯ ಸಮಯ.ದೇವಿನಗರ ಮುಖ್ಯರಸ್ತೆ ಪಕ್ಕದಲ್ಲಿರುವ ಕಸ ಹಾಕುವ ಖಾಲಿ ಜಾಗ.ಕಾರಿಗೆ ಬೆಂಕಿಯ ಕಿಡಿ ಅದೆಲ್ಲಿ ಬಿತ್ತೋ..ನಿಧಾನವಾಗಿ ಹೊತ್ತಿಕೊಂಡ ಬೆಂಕಿ ಒಂದೇ ಸಮನೆ ಕಾರು ಧಗಧಗಿಸುವಂತೆ ಮಾಡಿತ್ತು.
ಸ್ಕ್ರಾಪ್ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸುಟ್ಟು ಜೀವಂತ ಶವವಾಗಿದ್ದ.ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರು..ಇಂಚಿಂಚು ಪರಿಶೀಲನೆ ನಡೆಸಿದ್ದ ಕೊಡಿಗೆಹಳ್ಳಿ ಪೊಲೀಸರಿಗೆ ಸತ್ತವನ ಗುರುತು ಕೂಡ ಪತ್ತೆಯಾಗಿರಲಿಲ್ಲ .ಸಿಸಿಟಿವಿ ದೃಶ್ಯ ಆಧರಿಸಿ ತನಿಖೆಗೆ ಇಳಿದ ಖಾಕಿ ತಂಡಕ್ಕೆ ಸತ್ತವನ ಗುರುತು ಪತ್ತೆಯಾಗಿದೆ.
ಮದ್ಯವ್ಯಸನಿಯಾಗಿದ್ದ.ಕುಡಿದು ಸರಿಯಾಗಿ ಮನೆಗೆ ಹೋಗದೇ ಎಲ್ಲೆಂದರಲ್ಲಿ ಮಲಗಿ ಕೊಳ್ತಿದ್ದ. ವಿವಾಹವಾಗಿದ್ದ ವಿನೋದ್ ಪತ್ನಿಯಿಂದ ದೂರವಿದ್ದ.ದೊಡ್ಡಬೊಮ್ಮಸಂದ್ರದಲ್ಲಿ ತಾಯಿ ಜೊತೆಗೆ ವಾಸವಿದ್ದ.ಹೀಗಿದ್ದವನು ಅದೇ ರೀತಿ 29 ರ ರಾತ್ರಿ ಕೂಡ ಮನೆಯಿಂದ ಬಂದವನು ಮದ್ಯಪಾನ ಮಾಡಿ ದೇವಿನಗದಲ್ಲಿ ನಿಂತಿದ್ದ ಸ್ಕ್ರಾಪ್ ಕಾರಿನಲ್ಲಿ ಮಲಗಿದ್ದ..
ಅದ್ಯಾವಾಗ ಸೊಳ್ಳೆ ಬತ್ತಿ ಕಿಡಿ ಕಾರಿಗೆ ಅಂಟಿಕೊಳ್ತೋ..ಬೆಂಕಿ ಸಂಪೂರ್ಣ ಆವರಿಸಿಕೊಂಡಿದೆ… ಮದ್ಯಪಾನ ಮಾಡಿದ್ದರಿಂದ ಬೆಂಕಿ ಹೊತ್ತಿಕೊಂಡಿದ್ದು ಆತನ ಅರಿವಿಗೇ ಬಂದಿಲ್ಲ..ಮಲಗಿದ್ದಲ್ಲಿಯೇ ಸುಟ್ಟು ಕರಕಲಾಗಿದ್ದ..ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ಅಕ್ಕ ಪಕ್ಕ ವಿಚಾರಿಸಿದ್ದಾರೆ.ಚಹರೆ ಗುರುತಿಸಿ ಕುಟುಂಬಸ್ಥರ ಸಂಪರ್ಕ ಮಾಡಿದ್ದಾರೆ..ಈ ವೇಳೆ ಅರ್ಧ ಸುಟ್ಟ ಚಡ್ಡಿ ನೋಡಿ ಮೃತನ ತಾಯಿ ಮತ್ತು ಸಹೋದರಿ ಸತ್ತವನು ವಿನೋದ್ ಎಂದು ಗುರುತು ಪತ್ತೆ ಹಚ್ಚಿದ್ದಾರೆ. ಈ ರೀತಿ ಮನೆ ಬಿಟ್ಟು ವಾಹನದಲ್ಲಿ ಮಲಗುವ ಮುನ್ನ ಸೊಳ್ಳೆ ಬತ್ತಿ ಹಚ್ಚಿ ಇಡುವ ಮುಂಚೆ ಜೋಪಾನವಾಗಿರಿ.