ಬಾಗಲಕೋಟೆ ಜಿಲ್ಲೆಯ 7 ಮತಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, 2ನೇ ಪಟ್ಟಿಯಲ್ಲಿ ಬಿಡುಗಡೆಯಾದ 5 ದರಲ್ಲಿ 4 ಕ್ಷೇತ್ರಗಳ ಅಭ್ಯರ್ಥಿ ಬಿಡುಗಡೆಯಾಗಿವೆ. ಆದರೆ ಕೊನೆಯದಾಗಿ ಉಳಿದಿರುವ ತೇರದಾಳ ಕ್ಷೇತ್ರ ಇನ್ನೂ ಯಾರ `ಕೈ’ವಶವಾಗಲಿದೆ ಎಂಬುದೇ ಮರಿಚಿಕೆಯಾಗಿದೆ. ತೀವ್ರ ಕುತೂಹಲ ಮೂಡಿಸಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಟಿಕೆಟ್ ನೀಡುವಲ್ಲಿ ಹೈಕಮಾಂಡ್ಗೆ ತೀವ್ರ ತಲೆ ನೋವಾಗಿದ್ದು,
ಈ ಬಾರಿ ಸ್ಥಳೀಯ ಮುಖಂಡರ ಒತ್ತಡ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯ ಸಂಚಾಲಕರುಗಳಾದ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ ಎ ಆರ್ ಬೆಳಗಲಿ ಸಿದ್ದು ಕೊಣ್ಣೂರ, ನೇಕಾರ ಮುಖಂಡ ಡಾ. ಎಂ.ಎಸ್. ದಡ್ಡೇನವರ ಹೀಗೆ ಸರದಿಯಲ್ಲಿ ಮುಖಂಡರ ಪ್ರಾಬಲ್ಯವು ಹೈಕಮಾಂಡ್ಗೆ ಸವಾಲಾಗುವಲ್ಲಿ ಕಾರಣವಾಗಿದೆ.
ಅಳೆದು ತೂಗಿ 2 ನೇ ಪಟ್ಟಿ ಬಿಡುಗಡೆ ಮಾಡಿದರೂ ತೇರದಾಳ ಕ್ಷೇತ್ರದ ಅಭ್ಯರ್ಥಿ ಮಾತ್ರ ನಿಗೂಢವಾಗಿಯೇ ಉಳಿದಿದೆ. ಸ್ಥಳೀಯ ಕಾಂಗ್ರೆಸ್ನಲ್ಲಿ ಮಾತ್ರ ಅಷ್ಟೇ ಪ್ರಬಲವಾಗಿ ಹೋರಾಟ ನಡೆಸುತ್ತಿದ್ದು, ಈ ಬಾರಿ ನಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಶೀಘ್ರವೇ ಘೋಷಣೆಯಾಗಲಿರುವ ಅಭ್ಯರ್ಥಿ ಆಯ್ಕೆಯಲ್ಲಿ ಯಾರ ಹೆಸರು ನಮೂದಾಗಲಿದೆ ಎಂಬುದೇ ತೀವ್ರ ಕುತೂಹಲವಾಗಿದ್ದು, ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ
ವರದಿ: ಪ್ರಕಾಶ ಕುಂಬಾರ , ಬಾಗಲಕೋಟೆ