ಬಾಗಲಕೋಟೆ: ತೇರದಾಳ ಮತಕ್ಷೇತ್ರದಲ್ಲಿ ನಿರ್ಣಾಯಕರೇ ನೇಕಾರ ಸಮುದಾಯದಲ್ಲಿ ಸುಮಾರು 80,000 ಸಾವಿರ ನೇಕಾರ ಇರುವ ಕ್ಷೇತ್ರವಿದು. 2023 ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನೇಕಾರರ ಸಮುದಾಯಕ್ಕೆ ಟಿಕೆಟ್ ಸಿಗುವುದು ಶತಸಿದ್ಧ ಎಂದು ಬಾಗಲಕೋಟೆ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ರಾಜು ಅಂಬಲಿ ಹೇಳಿದರು.
ನೇಕಾರ ಸಮುದಾಯದ ಮಹಾ ನಾಯಕ ಹೇಳಿದ್ದಾರೆ ಟಿಕೆಟ್ ಕೇಳುವುದು ತಪ್ಪಲ್ಲ. ಟಿಕೆಟ್ ಕೇಳುವ ವಿಧಾನ ತಪ್ಪು ಅದಕ್ಕೆ ತಿರುಗೇಟ್ಟು ನೀಡಿದ ರಾಜು ಅಂಬಲಿ ನಿವೇ ನೇಕಾರ ಸಮುದಾಯಕ್ಕೆ ಬಿಜೆಪಿ ಟಿಕೆಟ್ ಕೊಡಿಸು ಬನ್ನಿ ಯಲುವಿಲ್ಲದ ನಾಲಿಗೆಯಿಂದ ಹೇಳುವುದು ಸುಲಭ ಕಷ್ಟಪಡುವುದು ಕಷ್ಟ ಆ ಮಹಾನ ನಾಯಕ ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದರು.
ಕೆಲವು ನೇಕಾರ ಮುಖಂಡರು ಸಿದ್ದು ಸವದಿ ಅವರ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ನೇಕಾರ ಸಮುದಾಯದ ಮುಖಂಡರು ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಖಂಡನೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ತೇರದಾಳ ಶಾಸಕ ಸಿದ್ದು ಸವದಿಯವರು ನೇಕಾರರನ್ನ ಒಡೆದು ಆಳುತ್ತಿದ್ದಾರೆ. ಇದು ಅವರ ಪದವಿಗೆ ಶೋಭೆ ತರುವಂತದ್ದಲ್ಲ. ನೇಕಾರ ಸಮುದಾಯದ ಮುಖಂಡರು ಬಿಜೆಪಿ ಕಚೇರಿಯಲ್ಲಿ ನೇಕಾರ ಸುದ್ದಿಗೋಷ್ಠಿ ಮಾಡಿದ್ದು ಖಂಡನೀಯ. ನೀವು ಬಹಿರಂಗವಾಗಿ ಮಾಡಿದ್ದರೆ ಅಲ್ಲಿಗೆ ನಾನು ಬರುತ್ತಿದ್ದೆ.
ಕೆಲವು ನೇಕಾರ ಸಮುದಾಯದ ಮುಖಂಡರು ಶಾಸಕ ಸಿದ್ದು ಸವದಿ ಅವರ ಕಪಿಮುಷ್ಠಿಯಲ್ಲಿ ಸಿಕ್ಕಿಕೊಂಡಿದ್ದಾರೆ ಇದು ನಮ್ಮ ನೇಕಾರ ಪರಿಸ್ಥಿತಿ. ತೇರದಾಳ ಕ್ಷೇತ್ರದ ನೇಕಾರರ ಅಭಿವೃದ್ಧಿ ಒಬ್ಬರೇ ಮಾಡಿದ್ದಲ್ಲ ಬಿಜೆಪಿ ಸರ್ಕಾರ ಮಾಡಿದ್ದು.
ಈಗ ಇವರು ಮಾಡಿದ್ದಾರೆ ಮುಂದೆ ಬೇರೆಯವರು ಬಂದು ಮಾಡುತ್ತಾರೆ ಅಭಿವೃದ್ಧಿ ಮಾಡುವುದು ಅವರ ಹಕ್ಕು ಅದನ್ನ ಪಡಕೊಳ್ಳೋದು ನಮ್ಮ ಹಕ್ಕು. ನಮ್ಮ ಸಮಾಜದ ಮಹಾನ ನಾಯಕ ತನ್ನ ವೈಯಕ್ತಿಕ ಕೆಲಸ ಮಾಡಿಕೊಂಡಿದ್ದಾರೆ ಹೊರತು ತೇರದಾಳ ಕ್ಷೇತ್ರದ ನೇಕಾರಿಗೆ ನೀನೇನು ಮಾಡಿಲ್ಲ ನೇಕಾರರ ಕೆಲಸ ನಾವು ಮಾಡಿದ್ದೇವೆ. ನೀವು ಮೊದಲು ನೇಕಾರರನ್ನು ಒಡೆದು ಆಳುವ ನೀತಿಯನ್ನು ಬಿಡಿ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜು ಅಂಬಲಿ ಹೇಳಿದರು.
ಶಾಸಕ ಸಿದ್ದು ಸವದಿ ತೇರದಾಳ ಮತಕ್ಷೇತ್ರದ ಸ್ಥಳೀಯ ವ್ಯಕ್ತಿ ಅಲ್ಲಾ ಸ್ಥಳೀಯ ನೇಕಾರ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡುತ್ತೇವೆ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ. 2008 ರಲ್ಲಿ ತೇರದಾಳ ಮತಕ್ಷೇತ್ರ ಉದಯವಾಯಿತು. ತೇರದಾಳ ಮತಕ್ಷೇತ್ರ ಇದು ನೇಕಾರ ಇರುವ ಕ್ಷೇತ್ರ.
ಸುಮಾರು 10 ವರ್ಷಗಳಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಹೋರಾಟ ನಾವು ಮಾಡಿದ್ದೇವೆ. ಈಗಲೂ ಹೋರಾಟ ಮಾಡ್ತಾ ಬಂದಿದ್ದೇವೆ. ಹಾಗಾಗಿ ಸ್ಥಳೀಯ ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ವರಿಷ್ಠರಿಗೆ ನಾವು ಮನವಿ ಮಾಡಿಕೊಂಡಾಗ ವರಿಷ್ಠರು ಹೇಳಿದ್ದಾರೆ. ಖಂಡಿತವಾಗಲೂ ನೇಕಾರ ಸಮುದಾಯಕ್ಕೆ ನಾವು ಟಿಕೆಟ್ ನೀಡುತ್ತೇವೆ ಎಂಬ ಭರವಸೆ ನಮಗೆ ನೀಡಿದ್ದಾರೆ. ಶಾಸಕ ಸಿದ್ದು ಸವದಿ ಸ್ಥಳೀಯ ವ್ಯಕ್ತಿ ಅಲ್ಲಾ ಅವರು ಬೇರೆ ಕ್ಷೇತ್ರದಿಂದ ಬಂದವರು.
ಡೋಂಗಿ ನೇಕಾರರಿಗೆ ಬಿಜೆಪಿ ಟಿಕೆಟ್ ಇಲ್ಲ. ನಿಜವಾದ ನೇಕಾರಿಗೆ ಬಿಜೆಪಿ ಟಿಕೆಟ್ ನೀಡುತ್ತೇವೆ ವರಿಷ್ಠರು ಹೇಳಿದ್ದಾರೆಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜು ಅಂಬಲಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬ್ರಿಜ್ ಮೋಹನ ಡಾಗಾ. ಕುಮಾರ ಕದಂ ಸೇರಿದಂತೆ ಅನೇಕರಿದ್ದರು ಇದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ