ಕಿಲ್ಲರ್ ಬಿಎಂಟಿಸಿ ಬಸ್ ಗೆ ನೆನ್ನೆ ರಾತ್ರಿ 60 ವರ್ಷದ ವ್ಯಕ್ತಿಯ ಎರಡು ಕಾಲಿನ ಮೇಲೆ ಹಿಂಬದಿ ಟೈರ್ ಹತ್ತಿದ್ದು, ವ್ಯಕ್ತಿಯ ಆರೋಗ್ಯ ಚಿಂತಾಜನಕವಾಗಿದೆ. ಸದ್ಯ ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಗಾಯಳು ಸ್ಥಿತಿ ಚಿಂತಾಜಾನಕ ವಾಗಿದೆ.
ಹೌದು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಿಂದ ಅಫಘಾತಗಳ ಸಂಖ್ಯೆ ಹೆಚ್ಚಾಗ್ತಿದೆ. ಕಿಲ್ಲರ್ ಅನ್ನೋ ಹಣೆಪಟ್ಟಿ ಪಡ್ದಿರೋ ಬಿಎಂಟಿಸಿ ಬಸ್, ನೆನ್ನೆಯೂ ವ್ಯಕ್ತಿ ಕಾಲಿನ ಮೇಲೆ ಹರಿದಿದೆ…ರಾತ್ರಿ 9.30 ರ ಸುಮಾರಿಗೆ ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಈ ಘಟನೆ ನಡೆದಿದ್ದು. 60 ವರ್ಷದ ವ್ಯಕ್ತಿಯ ಎರಡು ಕಾಲಿನ ಮೇಲೆ ಹಿಂಬದಿ ಚಕ್ರ ಹರಿದಿದೆ. ತೀವ್ರ ರಕ್ತ ಸ್ರಾವದಿಂದ ಗೋಳಾಡುತ್ತಿದ್ದ ವ್ಯಕ್ತಿಯನ್ನ ಕೂಡಲೇ ಸಾರ್ವಜನಿಕರು ಸ್ಥಳೀಯ ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ರು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಅಫಘಾತಕ್ಕೊಳಗಾದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳುದುಬಂದಿಲ್ಲ, ಇನ್ನು ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತೊಂದು ಕಡೆ ಇಂದು ಬೇಳಗ್ಗೆ 5.30 ರ ವೇಳೆ ನೀರಿನ ಟ್ಯಾಂಕರ್ ಹಾಗು ಕಸ ತುಂಬಿದ್ದ ಬೋಲೇರೋ ನಡುವೆ ಅಫಘಾತವಾಗಿದ್ದು, ಬೊಲೇರೋದಲ್ಲಿದ್ದ ಹೋಟಲ್ ನ ವೇಸ್ಟ್ ಸಂಪೂರ್ಣ ರೋಡ್ ಗೆ ಬಿದ್ದಿತ್ತು..ಇನ್ನು ರಸ್ತೆ ತುಂಬಾ ಹೋಟಲ್ ವೇಸ್ಟ್ ಬಿದ್ದಿರೋ ಕಾರಣ ರೋಡ್ ಸಂಪೂರ್ಣ ಜಾರುವ ಸ್ಥಿತಿ ನಿರ್ಮಾವಾಗಿತ್ತು. ಈ ವೇಳೆ ರೋಡ್ ಸ್ಕೀಡ್ ನಿಂದಾಗಿ 20ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು, ಗಾಯಗೊಂಡಿದ್ರು. ಇನ್ನು ಅಲ್ಲೇ ಇದ್ದ ಸ್ಥಳೀಯರು ವಾಹನ ಸವಾರರಿಗೆ ನಿಧಾನವಾಗಿ ಚಲಿಸಿ ಅಂತ ರೋಡ್ ಗೆ ಸೈಕಲ್ ಅಡ್ಡ ನಿಲ್ಲಿಸಿ ಗೈಡ್ ಮಾಡಿದ್ರು.. ಅಲ್ಲದೆ ರಸ್ತೆಯಲ್ಲಿ ಬಿದ್ದಿದ್ದ ಹೋಟಲ್ ವೇಸ್ಟ್ ಮೇಲೆ ಜನರು ಡಸ್ಟ್ ಪೌಡರ್ ಹಾಕಿ ಸ್ಕೀಡ್ ಆಗೋದನ್ನ ಕಡಿಮೆ ಮಾಡಿದ್ದಾರೆ.