ಯಾದಗಿರಿ: ಕಳೆದ ಗುರುವಾರ ಕೊಡೆಕಲ್ ಪಟ್ಟಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಯಾವುದೇ ಜಾತಿಗೆ ಸೀಮಿತವಾದದ್ದಲ್ಲ ಇದೊಂದು ರಾಜಕೀಯ ಪ್ರೇರಿತವಾದ ಗಲಾಟೆ ಆಗಿದ್ದು ಇದರಲ್ಲಿ ಜಾತಿಯನ್ನು ಎಳೆದು ತರುವುದು ಸರಿಯಲ್ಲ ಎಂದು ಹಾಲುಮತ ಸಮುದಾಯದ ಬಿಜೆಪಿ ಮುಖಂಡರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗುರುವಾರ ಪಟ್ಟಣದಲ್ಲಿ ನಡೆದ ಗಲಾಟೆಯಲ್ಲಿ ವಿವಿಧ ಸಮುದಾಯಗಳ ಹಲವು ಗಾಯಗೊಂಡಿದ್ದು ಕೇವಲ ಹಾಲುಮತ ಸಮುದಾಯದವರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ರಾಜಕೀಯ ಪ್ರೇರಿತವಾದ ಗಲಾಟೆ ಆಗಿದ್ದು ಇದನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲು ದಂಡಿನ್, ರಂಗನಗೌಡ ದೇವಕೇರಾ, ನಿಂಗು ಐಕುರ , ಬಸವರಾಜ,ಅನೇಕರು ಭಾಗವಹಿಸಿದ್ದರು