ಟಾಲಿವುಡ್ ನಟ ನಾಗಚೈತನ್ಯ ನಟಿ ಸಮಂತಾರಿಂದ ದೂರವಾದ ಬಳಿಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ನಟಿ ಶೋಬಿತಾ ಜೊತೆ ನಾಗ ಚೈತನ್ಯ ಹೆಸರು ಕೇಳಿ ಬರ್ತಿದ್ದು ಇದೀಗ ನಾಗಚೈತನ್ಯ ಕುರಿತು ನಟಿಯೊಬ್ಬರು ಪಾಸಿಟಿವ್ ಆಗಿ ಮಾತನಾಡಿದ್ದಾರೆ.
ಶೂಟಿಂಗ್ ಸೆಟ್ ನಲ್ಲಿ ನಾಗ ಚೈತನ್ಯ ಹೇಗಿರುತ್ತಾರೆ ಮತ್ತು ಮಹಿಳೆಯರನ್ನು ಅವರು ಹೇಗೆ ಗೌರವಿಸುತ್ತಾರೆ ಎನ್ನುವ ಕುರಿತು ನಟಿ ದಕ್ಷಾ ನಗರ್ಕರ್ ಮಾತನಾಡಿದ್ದಾರೆ. ನಾಗಚೈತನ್ಯ ರಂತಹ ಒಳ್ಳೆಯ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ, ಚಿತ್ರೀಕರಣ ನಡೆಯುವ ಸ್ಥಳದಲ್ಲಿನ ಅವರ ನಡೆತೆಯನ್ನೂ ದಕ್ಷಾ ಕೊಂಡಿದ್ದಾರೆ.
ನಾಗ ಚೈತನ್ಯ ಹಾಗೂ ದಕ್ಷಾ ‘ಬಂಗರ್ ರಾಜು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ದಕ್ಷಾ ಮತ್ತು ನಾಗ ಚೈತನ್ಯ ಹೆಜ್ಜೆ ಹಾಕಿದ್ದು, ಈ ಸಂದರ್ಭದಲ್ಲಿ ಕಿಸ್ ಕೊಡುವ ಹಾಗೂ ತಬ್ಬಿಕೊಳ್ಳುವ ದೃಶ್ಯಗಳು ಬಂದಾಗ ಚಿತ್ರೀಕರಣ ಮುಗಿಸಿ ದಕ್ಷಾಗೆ ಕ್ಷಮೆ ಕೇಳಿದ್ದರಂತೆ ನಾಗ್. ಅಷ್ಟೊಂದು ಗೌರವವನ್ನು ಅವರು ನಟಿಯರಿಗೆ ಕೊಡುತ್ತಾರೆ ಎಂದು ದಕ್ಷಾ ಹೇಳಿದ್ದಾರೆ.
‘ನಾಗ ಚೈತನ್ಯ ಯಾವಾಗಲೂ ಕೂಲ್ ಆಗಿ ಇರುತ್ತಾರೆ. ಅನೇಕ ಸಲ ನನ್ನ ಯೋಗಕ್ಷೇಮ ಕೇಳಿದ್ದಾರೆ. ಅವರ ಜೊತೆಗೆ ಕೆಲಸ ಮಾಡಿದ್ದನ್ನೂ ನಾನು ಯಾವತ್ತೂ ಮರೆಯುವುದಿಲ್ಲ ಎಂದಿದ್ದು, ಅವರೊಂದಿಗೆ ಮತ್ತೆ ಕೆಲಸ ಮಾಡುವ ಭಯಕೆಯನ್ನು ವ್ಯಕ್ತ ಪಡಿಸಿದ್ದಾರೆ.