ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ 4 ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಸಂಜೆ 7:30 ಕ್ಕೆ ನಡೆಯುವ ಟೂರ್ನಿಯ 12ನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.
ಶನಿವಾರ ಡಬ್ಬಲ್ ಹೆಡರ್ ಪಂದ್ಯಗಳು ಜರುಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಎದುರು ಗೆದ್ದು ಟೂರ್ನಿಯಲ್ಲಿ ಗೆಲುವಿನ ಶುಭರಾಂಭ ಮಾಡಲು ಮುಂಬೈ ಇಂಡಿಯನ್ಸ್ ಎದುರು ನೋಡುತ್ತಿದೆ. ಆರ್ಸಿಬಿ ವಿರುದ್ಧ 8 ವಿಕೆಟ್ ಸೋಲು ಕಂಡಿರುವ ರೋಹಿತ್ ಶರ್ಮಾ ಪಡೆ, ಸಿಎಸ್ಕೆ ವಿರುದ್ಧ ಪ್ರಾಬಲ್ಯ ಮೆರೆಯಲು ಹೊರಟಿದೆ. ಗುಜರಾತ್ ಟೈಟನ್ಸ್ ವಿರುದ್ಧ ಸೋತು ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 12 ರನ್ಗಳ ಗೆಲುವು ಸಾಧಿಸಿರುವ ಧೋನಿ ಬಳಗ, ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವು ಸಾಧಿಸುವ ಲೆಕ್ಕಾಚಾರ ಹಾಕಿಕೊಂಡಿದೆ.
ಆರ್ಸಿಬಿ ಪಂದ್ಯದಲ್ಲಿ ತಿಲಕ್ ವರ್ಮಾ (84*) ಬ್ಯಾಟ್ ಸದ್ದು ಮಾಡಿತ್ತಾದರೂ, ಉಳಿದ ಸ್ಟಾರ್ ಬ್ಯಾಟರ್ಗಳು ವೈಫಲ್ಯ ಅನುಭವಿಸಿದ್ದರು. ಆದರೆ ಸಿಎಸ್ಕೆ ವಿರುದ್ಧ ಅನುಭವಿಗಳಾದ ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಸಿಡಿದೇಳಬೇಕು. ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸಂಘಟಿಸುವಲ್ಲಿ ಎಡವಿದ್ದ ವೇಗಿಗಳಾದ ಜೋಫ್ರಾ ಅರ್ಚರ್, ಬೆಹ್ರನ್ಡ್ರಾಫ್ ಸಿಎಸ್ಕೆ ಎದುರು ಪುಟಿದೇಳಬೇಕಾಗಿದೆ.
ಪಂದ್ಯದ ವಿವರ
ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್
ದಿನಾಂಕ: ಏಪ್ರಿಲ್ 8, 2023
ಸಮಯ: ಸಂಜೆ 7.30ಕ್ಕೆ
ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಮುಖಾಮುಖಿ ಫಲಿತಾಂಶ
ಒಟ್ಟು ಪಂದ್ಯಗಳು: 34
ಮುಂಬೈ ಇಂಡಿಯನ್ಸ್: 20
ಚೆನ್ನೈ ಸೂಪರ್ ಕಿಂಗ್ಸ್: 14
ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI
1)ರೋಹಿತ್ ಶರ್ಮಾ (ನಾಯಕ)
2) ಇಶಾನ್ ಕಿಶನ್ (ವಿಕೆಟ್ ಕೀಪರ್)
3) ಸೂರ್ಯಕುಮಾರ್ ಯಾದವ್
4) ಕ್ಯಾಮೆರಾನ್ ಗ್ರೀನ್
5) ತಿಲಕ್ ವರ್ಮಾ
6)ಟಿಮ್ ಡೇವಿಡ್
7) ನೆಹಾಲ್ ವಡೇರ
8) ಹೃತಿಕ್ ಶೋಕಿನ್
9) ಪಿಯೂಷ್ ಚಾವ್ಲಾ
10) ಜೋಫ್ರಾ ಆರ್ಚರ್
11) ಅರ್ಷದ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI
1) ಡೆವೊನ್ ಕಾನ್ವೆ
2) ಋತುರಾಜ್ ಗಾಯಕ್ವಾಡ್
3) ಮೊಯಿನ್ ಅಲಿ
4) ಬೆನ್ ಸ್ಟೋಕ್ಸ್
5) ಅಂಬಾಟಿ ರಾಯುಡು
6) ರವೀಂದ್ರ ಜಡೇಜಾ
7) ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್)
8) ಶಿವಂ ದುಬೆ
9) ಮಿಚೆಲ್ ಸ್ಯಾಂಟ್ನರ್
10) ದೀಪಕ್ ಚಹರ್
11) ಆರ್ ಎಸ್ ಹಂಗರ್ಗೇಕರ್