ಬಾಲಿವುಡ್ ಬ್ಯೂಟಿ, ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ವಿದೇಶದಲ್ಲಿ ಸೆಟಲ್ ಆಗಿದ್ದಾರೆ.
ನಿಕ್ ಜೋನಸ್ ಅವರನ್ನು ಮದುವೆಯಾದ ನಟಿ ಪ್ರಿಯಾಂಕ ಇದೀಗ ಬಾಡಿಗೆ ತಾಯಿಯ ಮೂಲಕ ಮುದ್ದಾದ ಹೆಣ್ಣು ಮಗುವನ್ನು ಪಡೆದಿದ್ದು ಸದ್ಯ ಸಿನಿಮಾಗಳ ಜೊತೆ ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದು, ಕೆಲ ದಿನಗಳ ಕಾಲ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಸದ್ಯ ಪಿಗ್ಗಿ ಪತಿ ಹಾಗೂ ಮಗಳೊಂದಿಗೆ ಮುಂಬೈನಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಪ್ರಿಯಾಂಕಾಗೆ ಮುಂಬೈ ನಗರದ ಬಗ್ಗೆ ವಿಶೇಷ ಪ್ರೀತಿ ಇದ್ದು, ಮುಂಬೈನಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಗಳ ಜೊತೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿಯನ್ನು ಕರೆದುಕೊಂಡು ಬಂದಿದ್ದು, ದೇವಸ್ಥಾನದಲ್ಲಿ ಮಾಲ್ತಿಗೆ ದೇವರ ದರ್ಶನ ಮಾಡಿಸಿದ್ದಾರೆ.
ಪ್ರಿಯಾಂಕಾ ಅವರು ಮದುವೆ ಆಗಿ ವಿದೇಶಕ್ಕೆ ತೆರಳಿದರು. ಆದರೆ, ಅವರು ಭಾರತೀಯ ಸಂಪ್ರದಾಯ ಮರೆತಿಲ್ಲ. ವಿದೇಶದಲ್ಲೂ ಭಾರತೀಯ ಹಬ್ಬಗಳನ್ನು ಆಚರಿಸುತ್ತಿದ್ದು, ಅನೇಕರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.