ಧಾರವಾಡ: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯೊಬ್ಬಳು ಇಂದು ಅಸುನೀಗಿದ್ದು, ಸಾವಿನಲ್ಲೂ ಯುವತಿ ಸಾರ್ಥಕತೆ ಮೆರೆದಿದ್ದಾಳೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಕ್ಷತಾ ಅಶೋಕ ದೊಡವಾಡ (21) ಎಂಬ ಯುವತಿಗೆ ನಿನ್ನೆ ಅಪಘಾತವಾಗಿತ್ತು. ಗೋಶಾಲೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಉಪ್ಪಿನ ಬೆಟಗೇರಿಯ ಬೈಲಹೊಂಗಲ ರಸ್ತೆಯಲ್ಲಿ ಬೈಕ್ಗಳ ಮಧ್ಯೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಅಕ್ಷತಾಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದ ಅಕ್ಷತಾ ಇಂದು ಅಸುನೀಗಿದ್ದಾಳೆ. ಅಕ್ಷತಾ ಸಾವಿನ ದುಃಖದ ಮಧ್ಯೆಯೂ ಆಕೆಯ ಕುಟುಂಬಸ್ಥರು ಅಕ್ಷತಾಳ ಕಣ್ಣು, ಕಿಡ್ನಿ ಸೇರಿದಂತೆ ಇತ್ಯಾದಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.