ಚಂದನವನದ ಖ್ಯಾತ ಹಿರಿಯ ನಟಿ ಲೀಲಾವತಿ ಕುರಿತು ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೆ ಇರುತ್ತದೆ. ಸದ್ಯ ಲೀಲಾವತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಮಗ ನಟ ವಿನೋದ್ ರಾಜ್ ಕುಮಾರ್ ತಾಯಿ ಆರೈಕೆ ಮಾಡುತ್ತಿದ್ದಾರೆ.
ಲೀಲಾವತಿ ಇದುವರೆಗೆ ತಮ್ಮ ಪತಿಯ ಬಗ್ಗೆ ಎಂದು ಮಾತಾಡಿಲ್ಲ. ಲೀಲಾವತಿ ಮದುವೆ ವಿಚಾರ ಅನೇಕ ಬಾರಿ ಸುದ್ದಿಯಾಗಿದೆ. ಇದೀಗ ಸ್ಯಾಂಡಲ್ವುಡ್ ನಿರ್ದೇಶಕರೊಬ್ಬರು ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸ್ಯಾಂಡಲ್ವುಡ್ ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ಸೋಶಿಯಲ್ ಮೀಡಿಯಾದಲ್ಲಿ ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ ಕುಟುಂಬಕ್ಕೆ ಆಪ್ತರಾಗಿರೋ ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ಅವರು ಲೀಲಾವತಿಗೆ ಈ ಹಿಂದೆ ಮದುವೆ ಆಗಿತ್ತು. ಅಷ್ಟೇ ಅಲ್ಲದೇ ನಟ ವಿನೋದ್ ರಾಜ್ ಅವರಿಗೂ ಮದುವೆ ಆಗಿದ್ದು, ಓರ್ವ ಮಗನಿದ್ದಾನೆ ಎನ್ನುವ ಸುದ್ದಿಯಲ್ಲಿ ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದಾರೆ. ವಿನೋದ್ ರಾಜ್ ಅವರ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ ಎಂದು ಪ್ರಕಾಶ್ ರಾಜ್ ಮೆಹೋ ಬರೆದಿದ್ದಾರೆ.
ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎಂಬುವವರು. ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದ್ದು, ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ ಪ್ರಕಾಶ್ ರಾಜ್ ಮೆಹೋ ಬರೆದುಕೊಂಡಿದ್ದಾರೆ.
ಮತ್ತೊಂದು ಫೋಟೋದಲ್ಲಿ ವಿನೋದ್ ರಾಜ್ ತಾಯಿ, ಪತ್ನಿ ಹಾಗೂ ಮಗನೊಂದಿಗೆ ಸೋಫಾಮೇಲೆ ಕುಳಿತಿದ್ದಾರೆ. ವಿನೋದ್ ರಾಜ್ ಹೆಂಡತಿ ಮತ್ತು ಮಗ ಚೆನ್ನೈನಲ್ಲಿ ವಾಸವಾಗಿದ್ದು ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ.
ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ 6 ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಖಂಡಿತ ಅವರು ಯಾರೋ ಅಭಿಮಾನಿಗಳು ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ ಮಾರ್ಕ್ ಕಾರ್ಡ್ ಮತ್ತು ಆಸ್ತಿ ದಾಖಲೆ ಪತ್ರಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇದನ್ನು ಬಹಿರಂಗ ಪಡಿಸಿದ್ದೇನೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ