ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏ.9) ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ (Bandipur National Park) ಸಫಾರಿ ನಡೆಸಿದ್ದು, ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಇವತ್ತು ಸಫಾರಿ (PM Modi in Safari) ಹಾಕೊಂಡು, ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ವೋಟು ಒತ್ತಿ ಬಿಡುತ್ತಾರಾ? ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಅವರು ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ, ಆದರೆ ಮಾನವರ ರಕ್ಷಣೆಯನ್ನೂ ಮಾಡಬೇಕಲ್ವ? ವನ್ಯಜೀವಿಗಳಿಂದ ಎಷ್ಟು ದಾಳಿಯಾಗಿದೆ, ಎಷ್ಟು ಜೀವ ಹಾನಿಯಾಗಿದೆ. ಯಾವುದಾದರೂ ಒಂದು ಕುಟುಂಬಕ್ಕೆ ಭೇಟಿ ಕೊಟ್ಟಿದ್ದಾರಾ? ವನ್ಯಜೀವಿ ದಾಳಿಗೆ ಒಳಗಾದ ಕುಟುಂಬ ಪರಿಸ್ಥಿತಿ ಏನಾಗಿದೆ ಎಂದು ನೋಡಿದ್ದಾರಾ? ಕೂಲಿಂಗ್ ಗ್ಲಾಸ್, ಸೂಟು ಬೂಟು ಹಾಕೊಂಡು ಬಂದ್ರೆ ಆಗುತ್ತಾ? ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಅಂತ ವರದಿ ಬಂದಿದೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಆಗಲ್ಲ. ನಾಡಿನ ಜನತೆ ಇದನ್ನ ಅರ್ಥ ಮಾಡಿಕೊಳ್ಳಬೇಕು