ಬೆಂಗಳೂರು: ಕಾಡಿಗೆ ಸಫಾರಿಗೆಂದು (Safari) ಹೋದಾಗ ಸಫಾರಿ ಡ್ರೆಸ್ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್ನಲ್ಲಿ ಇರಬೇಕು. ಆದರೆ ಕುಮಾರಸ್ವಾಮಿ (H.D.Kumaraswamy) ಅವರಿಗೆ ಅದು ಎರಡೂ ಹಾಕಲು ಬರುವುದಿಲ್ಲವಲ್ಲ, ಏನುಮಾಡುವುದು ಎಂದು ಮೋದಿ (Narendra Modi) ಬಂಡೀಪುರ (Bandipur) ಅರಣ್ಯ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನರಿಗೆ ನಾಯಕ ಅವರು. ಅಂತಹ ರೋಲ್ ಮಾಡೆಲ್ಗೆ (Roll Model) ರೋಲ್ ಮಾಡೆಲ್ ತರಹ ಇರಬೇಡಿ ಸ್ವಾಮಿ ಎಂದು ಹೇಳಲಾಗುವುದಿಲ್ಲ ಎಂದರು.
ಕೋವಿಡ್ (Covid) ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು? ಕಾಂಗ್ರೆಸ್ನವರು (Congress) ಲಸಿಕೆ ತೆಗೆದುಕೊಳ್ಳಬೇಡಿ ಎಂದಿದ್ದರು. ಇಡೀ ವಿಶ್ವದಲ್ಲಿ ಭಾರತ ಮಾದರಿಯಾಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ಮನೆ ಪಾಪ ಏನೋ ಹೇಳಬೇಕು ಎಂದು ಹೇಳುತ್ತಿದ್ದಾರೆ ಅಷ್ಟೇ. ಆದರೆ ಜನರು ಬುದ್ದಿವಂತರಿದ್ದಾರೆ ಎಂಬುದು ಗೊತ್ತಿರಲಿ. ಇಂತಹ ಹೇಳಿಕೆಗಳಿಂದ ಅವರು ಸೆಲ್ಫ್ ವಿಕೆಟ್ ಹೊಡೆದುಕೊಳ್ಳುತ್ತಿದ್ದಾರೆ. ಮೋದಿಯವರ ಬಗ್ಗೆ ಕಿಡಿಕಾರಿದರೆ ಅದು ಇವರಿಗೆ ರಿವರ್ಸ್ ಗೇರ್ ಆಗುತ್ತದೆ ಎಂದು ಹರಿಹಾಯ್ದರು.