ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಸಾಕಷ್ಟು ಸಮಯವೇ ಕಳೆದು ಹೋಗಿದೆ. ಆದರೆ ಇಂದಿಗೂ ಅಪ್ಪು ಪ್ರತಿಯೊಬ್ಬರ ಮನಸ್ಸಲ್ಲಿ ಅಜರಾಮರವಾಗಿದ್ದಾರೆ. ಇದೀಗ ಕ್ರಿಕೆಟರ್ ಕ್ರಿಸ್ ಗೇಲ್ ಪುನೀತ್ ರಾಜ್ ಕುಮರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಸದ್ಯ ಐಪಿಎಲ್ 16ನೇ ಸೀಸನ್ ಆರಂಭವಾಗಿದ್ದು, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಕಮೆಂಟರಿ ಬಾಕ್ಸ್ ಮೂಲಕ ಆರ್ಸಿಬಿಗೆ ಬೆಂಬಲ ನೀಡುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆರ್ಸಿಬಿ ಅನ್ಬಾಕ್ಸಿಂಗ್ನಲ್ಲಿಯೂ ಈ ದಿಗ್ಗಜರು ಪಾಲ್ಗೊಂಡಿದ್ದರು. ಆರ್ಸಿಬಿಯ ಭಾಗವಾಗಿರುವ ಮಿಸ್ಟರ್ ನ್ಯಾಗ್ಸ್ ಕ್ರಿಸ್ ಗೇಲ್ ಸಂದರ್ಶನ ಮಾಡಿದ್ದು ಸಂದರ್ಶನದಲ್ಲಿ ಅಪ್ಪು ಅವರನ್ನು ಕ್ರಿಸ್ ಗೇಲ್ ನೆನಪು ಮಾಡಿಕೊಂಡಿದ್ದಾರೆ.
ಮಿಸ್ಟರ್ ನಾಗ್ಸ್ ಅಲಿಯಾಸ್ ದಾನಿಶ್ ಸೇಠ್ ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಾ, ನಿಮ್ಮ ತವರು ಯಾವುದು ಅಥವಾ ನಿಮ್ಮ ಹೋಮ್ಟೌನ್ ಯಾವುದು ಎಂದಾಗ ನನಗೆ ಎರಡು ಹೋಮ್ ಟೌನ್ ಇದೆ. ಒಂದು ಕೆರೆಬಿಯನ್ ಮತ್ತೊಂದು ಕಲಬುರ್ಗಿ ಎಂದಿದ್ದಾರೆ. ಕಲಬುರ್ಗಿಗೆ ಭೇಟಿ ನೀಡಿರುವುದಾಗಿಯೂ ಹೇಳಿರುವ ಕ್ರಿಸ್ ಗೇಲ್, ಜೋಳದ ರೊಟ್ಟಿ, ಶೆಂಗ ಚಟ್ನಿ ಚೆನ್ನಾಗಿರುತ್ತೆ ಎಂದು ನೆನಪು ಮಾಡಿಕೊಂಡಿದ್ದಾರೆ. ಪುನೀತ್ ನಟನೆಯ ದೊಡ್ಮನೆ ಹುಡುಗ ಚಿತ್ರದ ‘ತ್ರಾಸಾಕ್ಕೆತಿ’ ಹಾಡು ಹಾಡಿದ್ದು, ಈ ನಡುವೆ ವಿಶ್ವದಲ್ಲಿ ಇರುವುದು ಇಬ್ಬರೇ ಬಾಸ್ಗಳು ಒಬ್ಬರು ಅಪ್ಪು ಬಾಸ್ ಹಾಗೂ ಮತ್ತೊಬ್ಬರು ಯೂನಿವರ್ಸಲ್ ಬಾಸ್ ಎಂದಿದ್ದಾರೆ ಕ್ರಿಸ್ ಗೇಲ್. ಮಾತ್ರವಲ್ಲದೆ ಅಪ್ಪುವನ್ನು ಮಿಸ್ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಆರ್ಸಿಬಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಆರ್ಸಿಬಿ ತಂಡದ ರಾಯಭಾರಿಯಾಗಿಯೂ ಇದ್ದರು. ಆರ್ಸಿಬಿಯ ಹಲವು ಆಟಗಾರರೊಟ್ಟಿಗೆ ಪುನೀತ್ ರಾಜ್ಕುಮಾರ್ ಉತ್ತಮ ಸ್ನೇಹವನ್ನು ಹೊಂದಿದ್ದರು. ಸದ್ಯ ಯೂನಿವರ್ಸಲ್ ಬಾಸ್ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಪುನೀತ್ ರಾಜ್ ಕುಮಾರ್ ಅವರನ್ನು ಯೂನಿವರ್ಸಲ್ ಬಾಸ್ ಎಂದಿರುವುದು ಅಪ್ಪು ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.