ಬಾಲಿವುಡ್ ನ ಖ್ಯಾತ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಈ ಹಿಂದಿನಿಂದಲೂ ನೆಪೋಟಿಸಂನ ಬೆಂಬಲಿಸುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯಾರನ್ನಾದರೂ ಚಿತ್ರರಂಗದಿಂದ ಹೊರ ಹಾಕಬೇಕು, ಚಿತ್ರರಂಗದಲ್ಲಿ ತುಳಿಯಬೇಕು ಎಂದರೆ ಕರಣ್ ಜೋಹರ್ ಮುಂಚೂಣಿಯಲ್ಲಿರುತ್ತಾರೆ. ಇದೇ ಕಾರಣಕ್ಕೆ ಈ ಮೊದಲು ಕಾರ್ತಿಕ್ ಆರ್ಯನ್ ಹಾಗೂ ಕರಣ್ ಜೋಹರ್ ಮಧ್ಯೆ ಕಿತ್ತಾಟ ಆಗಿದೆ ಎನ್ನಲಾಗಿತ್ತು. ಆದರೆ ಇದೀಗ ಎಲ್ಲವೂ ಸರಿಯಾದಂತಿದ್ದು ಇಬ್ಬರು ಭೇಟಿ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರಣ್ ಜೋಹರ್ ನಿರ್ಮಾಣದಲ್ಲಿ 2019ರಲ್ಲಿ ‘ದೋಸ್ತಾನ 2’ ಘೋಷಣೆ ಮಾಡಿದ್ದು ಈ ಸಿನಿಮಾದಲ್ಲಿ ನಟ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಆದರೆ ಕರಣ್ ಬಿಹೇವಿಯರ್ ಸರಿ ಇಲ್ಲ ಎನ್ನುವ ಕಾರಣಕ್ಕೆ ಕಾರ್ತಿಕ್ ಈ ಚಿತ್ರದಿಂದ ಹೊರ ಬಂದರು. ಈ ವಿಚಾರದಲ್ಲಿ ಕರಣ್ ಜೋಹರ್ ಅವರ ಬಗ್ಗೆ ಸಾಕಷ್ಟು ಟೀಕೆ ಮಾಡಲಾಯಿತು. ಆದರೆ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಇಬ್ಬರೂ ಮತ್ತೆ ಭೇಟಿ ಆಗಿರೋದು ಅಚ್ಚರಿ ಮೂಡಿಸಿದೆ.
ಕಾರ್ತಿಕ್ ಆರ್ಯನ್ ಅವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗಿದೆ. ‘ಭೂಲ್ ಭುಲಯ್ಯ 2’ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಹಲವು ನಿರ್ಮಾಪಕರು ಕಾರ್ತಿಕ್ ಮನೆ ಎದುರು ನಿಂತಿದ್ದಾರೆ. ಈ ಕಾರಣಕ್ಕೆ ಕರಣ್ ಜೋಹರ್ ಅವರು ಕಾರ್ತಿಕ್ ಜೊತೆ ಸಿನಿಮಾ ಮಾಡೋಕೆ ಮುಂದೆ ಬಂದರಾ ಎನ್ನುವ ಪ್ರಶ್ನೆ ಶುರುವಾಗಿದೆ.