ಹುಬ್ಬಳ್ಳಿ: ನೀವು ಹಿರಿಯ ನಾಯಕ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಾಯಕರ ಮಾತು ಕೇಳಿ ನನಗೆ ನೋವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಮೂಲಕ ಈ ಬಾರಿ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುವುದು ಅನುಮಾನ ಎಂದು ಪರೋಕ್ಷ ಸೂಚನೆಯನ್ನು ಶೆಟ್ಟರ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಹೈಕಮಾಂಡ್ನಿಂದ ನನಗೆ ಕರೆ ಬಂದಿದ್ದು ನಿಜ. ಆಗ ಬೇರೆಯವರಿಗೆ ಅವಕಾಶ ಮಾಡಿಕೊಂಡಿ ಎಂದು ವರಿಷ್ಠರು ಹೇಳಿದ್ದಾರೆ. ಆ ಮಾತು ಕೇಳಿ ನನಗೆ ನೋವಾಗಿದೆ. ಕಳೆದ 30 ವರ್ಷಗಳಿಂದ ಪಕ್ಷ ಸಂಘಟಿಸಿದ್ದೇನೆ. ಬಿಎಸ್ ಯಡಿಯೂರಪ್ಪ ಅವರ ಜೊತೆ ನಿಂತು ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟಿಸಿದ್ದೇನೆ ಎಂದು ಹೇಳಿದ್ದಾರೆ.
HD Revanna: ಸಾಮಾನ್ಯ ಕಾರ್ಯಕರ್ತ ಅಂದ್ರೇ ಯಾರು? ಎಚ್ಡಿಕೆ ವಿರುದ್ಧ ಎಚ್ಡಿ ರೇವಣ್ಣ ಪರೋಕ್ಷ ಅಸಮಾಧಾನ
ನಾನು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ನಾನು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ಮತ್ತೊಂದು ಬಾರಿ ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ಗೆ ಜಗದೀಶ್ ಶೆಟ್ಟರ್ ಸೆಡ್ಡು ಹೊಡೆದಿದ್ದಾರೆ.
ಕೆಎಸ್ ಈಶ್ವರಪ್ಪ ಅವರ ರಾಜಕೀಯ ನಿವೃತ್ತಿ ಅವರಿಗೆ ಬಿಟ್ಟಿದ್ದು, ನಾನು ಇನ್ನೂ 10 ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಕಳೆದ 30 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದವರಿಗೆ ಈ ರೀತಿ ಹೇಳಿದರೆ ನೋವಾಗಲ್ವಾ ಎಂದು ಪ್ರಶ್ನಿಸಿದ ಜಗದೀಶ್ ಶೆಟ್ಟರ್, ನಾವೆಲ್ಲಾ ಟಿಕೆಟ್ ನೀಡಿದವರು. ಈ ಬಾರಿ ಚುನಾವಣೆಗೆ ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ.