ರಾಮನಗರ: ಕನಕಪುರ ತಾಲೂಕು ಸಾತನೂರು ಹೋಬಳಿಯ ನಾಯಕನಹಳ್ಳಿ ಶ್ರೀ ವೀರ ಭದ್ರ ಸ್ವಾಮಿಯ ಜಾತ್ರಾ ಮಹೋತ್ಸವದ ಅಗ್ನಿ ಕೊಂಡೋತ್ಸವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದು ಅರ್ಚಕರೊಬ್ಬರು ಮೈ ಸುಟ್ಟುಕೊಂಡು ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಅರ್ಚಕರು ಅದೇ ಊರಿನ ಶ್ರೀ ವೀರಭದ್ರ ಸ್ವಾಮೀಯ ಅರ್ಚಕರಾಗಿದ್ದರು. ಕೆಂಡದ ಹಬೆಗೆ ಅರ್ಚಕರ ದೇಹ ಸಂಪೂರ್ಣವಾಗಿ ಗಾಯಗೊಂಡಿದೆ. ಅರ್ಚಕರನ್ನು ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರತಿ ವರ್ಷವೂ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಆದ್ರೆ ಈ ಬಾರಿಯೇ ಇಂತಹ ಘೋರ ಅವಘಡ ನಡೆದಿದೆ ಎಂದು ಗ್ರಾಮಸ್ಥರು, ಭಕ್ತಾದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.