ಮೈಸೂರು: ವಿಧಾನಸಭಾ ಎಲೆಕ್ಶನ್ ರಂಗೇರಿದೆ. ಬಿಜೆಪಿಯ ಹುರಿಯಾಳುಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಮೊದಲ ಹಂತದಲ್ಲಿ 189 ಮಂದಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಮೈಸೂರು ಜೆಲ್ಲೆಯ 11 ವಿಧಾನಸಭಾ ಕ್ಷೇತ್ರದ ಪೈಕಿ 9 ಕ್ಷೇತ್ರಗಳಿಗೆ ಕಮಲ ಕಲಿಗಳ ಹೆಸರನ್ನ ಘೋಷಣೆ ಮಾಡಲಾಗಿದೆ.
ಮೈಸೂರಿನ ಪ್ರತಿಷ್ಠಿತ ವರುಣಾ ಕ್ಷೇತ್ರದಿಂದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು ಇಬ್ಬರ ನಡುವೆ ಜಿದ್ದಾಜಿದ್ದಿನ ಕದನ ಸಾಕ್ಷಿಯಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ , ಜೆಡಿಎಸ್ ನಾಯಕ ಜಿಟಿ ದೇವೇಗೌಡ ಸ್ಪರ್ಧೆ ಮಾಡ್ತಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಅವರನ್ನ ಆಯ್ಕೆ ಮಾಡಲಾಗಿದೆ.
ಕಳೆದ 3 ತಿಂಗಳ ಹಿಂದೆ ವಾಸು ಪುತ್ರ ಕವೀಶ್ ಬಿಜೆಪಿ ಸೇರ್ಪಡೆಯಾಗಿದ್ರು.ಇನ್ನುಳಿದಂತೆ ಚಾಮರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ನಾಗೇಂದ್ರಟಿ. ನರಸೀಪುರದಿಂದ – ಡಾ. ರೇವಣ್ಣ, ಪಿರಿಯಾಪಟ್ಟಣ – ಸಿ. ಹೆಚ್. ವಿಜಯಶಂಕರ್, ಕೆಆರ್ ನಗರ – ವೆಂಕಟೇಶ್ ಹೊಸಹಳ್ಳಿ , ನರಸಿಂಹರಾಜ – ಸಂದೇಶ್ ಸ್ವಾಮಿ ,ನಂಜನಗೂಡು – ಹರ್ಷವರ್ಧನ್ ಹುಣಸೂರು – ದೇವರಹಳ್ಳಿ ಸೋಮಶೇಖರ್ ಅವರಿಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ನೀಡಿದೆ.
2 ಕ್ಷೇತ್ರ ಸಸ್ಪೆನ್ಸ್
ಮೈಸೂರಿನ ಬಿಜೆಪಿ ಭದ್ರಕೋಟೆ KR ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಅನೌನ್ಸ್ ಆಗಿಲ್ಲ. ಹಾಲಿ ಶಾಸಕ ರಾಮದಾಸ್ ಹಾಗೂ ಮುಡಾ ಮಾಜಿ ಅಧ್ಯಕ್ಷ ಹೆಚ್. ವಿ. ರಾಜೀವ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಮದಾಸ್ ಒಟ್ಟು 4 ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದ್ರೆ ಈ ಅವಧಿಯಲ್ಲಿ ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಇದೆ. ಹಾಗೆಯೇ HD ಕೋಟೆ ಕ್ಷೇತ್ರದ ಟಿಕೆಟ್ ಕೂಡ ಪೆಂಡಿಂಗ್ ಇದ್ದು , 2ನೇ ಪಟ್ಟಿಯಲ್ಲಿ ಅಚ್ಚರಿ ಅಭ್ಯರ್ಥಿ ಹೆಸರು ಬಿಡುಗಡೆ ಆಗುವ ನಿರೀಕ್ಷೆ ಇದೆ.