ಕಾಲಿವುಡ್ನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚಿಗೆ ಸೂಪರ್ ಸ್ಟಾರ್ ಅಜಿತ್ ಸಿನಿಮಾಗೆ ನಿರ್ದೇಶನ ಮಾಡೋದಾಗಿ ಅನೌನ್ಸ್ ಮಾಡಿದ್ದರು. ಆದರೆ ಶೂಟಿಂಗ್ ಆರಂಭಕ್ಕೂ ಮುನ್ನವೇ ವಿಘ್ನೇಶ್ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಮಾಡಿ ಅಂದಿದ್ದಕ್ಕೆ ಚಿತ್ರದಿಂದ ಹೊರನಡೆದಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕ ವಿಘ್ನೇಶ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ನಿರ್ಮಾಪಕರಿಗೆ ಕಥೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತಂತೆ, ಸಣ್ಣ ಪುಟ್ಟ ಬದಲಾವಣೆ ಮಾಡಬಹುದು. ಆದರೆ ಸೆಕೆಂಡ್ ಹಾಫ್ ಫುಲ್ ಬದಲಾಯಿಸುವುದಕ್ಕೆ ಆಗಲ್ಲ ಎಂದು ವಿಘ್ನೇಶ್ ಪ್ರಾಜೆಕ್ಟ್ ಕೈ ಬಿಡುವ ಮನಸ್ಸು ಮಾಡಿದ್ದಾರೆ. ಸಹಿ ಮಾಡಿದ ಮೇಲೆ ನಮ್ಮ ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಬೇಕು ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಅಂದರೆ ಯೋಚನೆ ಮಾಡಬಹುದಿತ್ತು. ಆದರೆ ಸೆಕೆಂಡ್ ಹಾಫ್ ಸಂಪೂರ್ಣ ಬದಲಾಯಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಸೆಕೆಂಡ್ ಹಾಫ್ನಲ್ಲಿ ಬರುವುದೇ ಮುಖ್ಯವಾದ ಕಥೆ ಅದೇ ಬೇಡ ಅಂದರೆ ಹೇಗೆ? ನನ್ನ ಕಥೆಗೆ ಬೆಲೆ ಎಲ್ಲಿದೆ ಎಂದು ವಿಘ್ನೇಶ್ ಪ್ರಶ್ನಿಸಿದ್ದಾರೆ.
ತಲಾ ಅಜಿತ್ ಕುಮಾರ್ ಸರ್ ಜೊತೆ ಏನೂ ಸಮಸ್ಯೆ ಇರಲಿಲ್ಲ, ಪ್ರತಿಯೊಂದು ಸೂಪರ್ ಆಗಿತ್ತು. ನನ್ನ ಕಥೆಯನ್ನು ನಾನು ಬದಲಾಯಿಸುವುದಿಲ್ಲ. ಆದರೆ ನಿರ್ಮಾಪಕರು ಕಿರಿಕಿರಿ ಮಾಡಿಬಿಟ್ಟರು. ನಿರ್ಮಾಪಕರ ಡಿಮ್ಯಾಂಡ್ನ ಕೇಳಬಹುದು. ಆದರೆ ಇಡೀ ಕಥೆ ಬದಲಾಯಿಸಬೇಕು ಅಂದ್ರೆ ಯಾಕೆ ನಮ್ಮ ಕತೆಯನ್ನು ಆರಂಭದಲ್ಲಿ ಒಪ್ಪಿಕೊಳ್ಳಬೇಕು? ನಾನು ಬದಲಾಯಿಸುವುದಿಲ್ಲ ಎಂದು ಹೇಳಿ ಹೊರ ಬಂದೆ ಎಂದು ವಿಘ್ನೇಶ್ ಸಿನಿಮಾದಿಂದ ಹೊರ ಬಂದಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ