ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಸದ್ಯ ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿದ್ದಾರೆ. ಹೊಸ ಬಗೆಯ ಕಂಟೆಂಟ್ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಮದುವೆ ಕುರಿತು ಮಾತನಾಡಿದ್ದಾರೆ. ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನಟಿ ತಿಳಿಸಿದ್ದಾರೆ.
2007ರಲ್ಲಿ ತೆರೆಕಂಡ ‘ಸಜನಿ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಶರ್ಮಿಳಾ ಮಾಂಡ್ರೆ ಬಳಿಕ ನವಗ್ರಹ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನ ಹೊತ್ತಿದ್ದು, ಇದೀಗ ಮದುವೆ ಮಾತನಾಡಿದ್ದಾರೆ.
ನನಗೆ ಯಾವುದೇ ಮದುವೆಗೆ ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ ಆಗುತ್ತಿಯಾ, ಮದುವೆಯ ಯೋಚನೆ ಇಲ್ವಾ ಅಂತ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಯಾವುದೇ ಫಂಕ್ಷನ್ಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತೇನೆ, ಮದುವೆ ಮನೆಗಳಿಗೆ ಹೋಗುವುದು ಎಂದರೆ ಭಯ ಎಂದಿದ್ದಾರೆ.
ಅಷ್ಟಕ್ಕೂ ತಮಗೆ ಮದುವೆ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಈಗ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಿಂಜರಿಯುತ್ತಾರೆ. ತಮಗೆ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ನಾನು ಅಂತವಳಲ್ಲ, ನಾನು ಮದುವೆಯಾಗುವುದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಮದುವೆಯಾಗುತ್ತೇನೆ ಎಂದಿದ್ದಾರೆ. ಎಂಥ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, ಚಿಕ್ಕವಳಿರುವಾಗ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದು ಅಂದುಕೊಂಡಿದ್ದೆ. ಈಗ ಅದ್ಯಾವುದೂ ಆಸೆ ಇಲ್ಲ. ಅವೆಲ್ಲಾ 23-24ನೇ ವಯಸ್ಸಿಗೆ ಮುಗಿದುಹೋದವು. ಈಗ ಸ್ವೀಟ್, ನೈಸ್ ಮತ್ತು ಒಳ್ಳೆಯ ಪರ್ಸನ್ಯಾಲಿಟಿ ಇರೋ ಹುಡುಗ ಬೇಕು ಅಷ್ಟೇ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹುಡುಗನೇ ಬೇಕೆಂದೇನೂ ಇಲ್ಲ, ಯಾವ ಕ್ಷೇತ್ರದವನಾದರೂ ಓಕೆ ಎಂದಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ.