ಬಾಲಿವುಡ್ ನಟಿ ಕಂಗನಾ ರಣಾವತ್ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದದ ಹೇಳಿಕೆಗಳ ಮೂಲಕವೇ ಸುದ್ದಿಯಾಗೋ ಕಂಗನಾ ಈ ಭಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತನ್ನ ಅಣ್ಣ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಎನ್ ಕೌಂಟರ್ ಕಾರಣದಿಂದಾಗಿ ಸಖತ್ ಸುದ್ದಿ ಆಗುತ್ತಿದ್ದಾರೆ. ಗ್ಯಾಂಗ್ ಸ್ಟರ್ ಗಳಿಗೆ ಸಿಂಹಸ್ವಪ್ನವಾಗಿರುವ ಯೋಗಿ ಆದಿತ್ಯನಾಥ್ ರೌಡಿಗಳ ಹೆಡೆಮೂರಿ ಕಟ್ಟಿ ಜೈಲಿಗೆ ಅಥವಾ ಸ್ಮಶಾನಕ್ಕೆ ಕಳುಹಿಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಉತ್ತರ ಪ್ರದೇಶವನ್ನು ರೌಡಿಗಳಿಂದ ಮುಕ್ತಗೊಳಿಸುತ್ತೇನೆ ಎಂದು ಹೊರಟಿರುವ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ಬಾಯ್ತುಂಬಾ ಹೊಗಳಿದ್ದಾರೆ. ಯೋಗಿ ಕೈಗೊಂಡಿರುವ ಈ ಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿರುವ ಕಂಗನಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರ. ಅವರನ್ನು ನನ್ನಷ್ಟು ಪ್ರೀತಿಸುವವರೂ ಯಾರೂ ಇಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಮಗ ಅಸದ್ ಮತ್ತು ಆತನ ಸಹಚರರನ್ನು ಉತ್ತರ ಪ್ರದೇಶದ ಪೊಲೀಸರು ಎನ್ ಕೌಂಟರ್ ಮಾಡಿ ಸಾಯಿಸಿದ್ದಾರೆ. ಈ ಸಂಬಂಧವಾಗಿ ಕಂಗನಾಗೆ ಮತ್ತಷ್ಟು ಹುಮ್ಮಸ್ಸು ಬಂದಿದ್ದು ಯೋಗಿ ಆದಿತ್ಯನಾಥ್ ಅವರನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದ್ದಾರೆ.