ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಒಳ ಮೀಸಲಾತಿ ವಿರೋಧಿ ಹೋರಾಟ ಸಮಿತಿ ಶಿರಹಟ್ಟಿ ತಾಲೂಕಿನ ಭೂಮಿ ವಡ್ಡರ ಕೊರವ ಕೊರಚ ಹಾಗೂ ಇನ್ನಿತರೆ ಸಮಾಜಗಳ ಒಳ ಮೀಸಲಾತಿಯನ್ನು ಜಾರಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಹಿಂಮ್ ಪಡೆಯಬೇಕು ಎಂದು ಆದರಹಳ್ಳಿಯ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು,
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಂಜಾರ ಸಮುದಾಯದ ಮುಖಂಡರು. ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನು ಮಾಡಿರುವುದನ್ನು ರದ್ದುಪಡಿಸಬೇಕು ಹಾಗೂ ಒಳ ಮೀಸಲಾತಿ ವಿರೋಧಿಸಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಆದರಹಳ್ಳಿ ಗವಿಮಠದ ಕುಮಾರಸ್ವಾಮಿಜಿ ಯವರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು.
ಇಲ್ಲದಿದ್ದರೆ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು . ಈ ಸಮಯದಲ್ಲಿ ಬಂಜಾರ ಲಂಬಾಣಿ, ಭೂಮಿ ವಡ್ಡರ ಕೊರವ ಸಮಾಜದ ನೂರಾರು ಜನರು ಹಾಗೂ ಲಂಬಾಣಿ ಸಮಾಜದ ಯುವ ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.