ಧಾರವಾಡ: 2023ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಕುರುಬ ಸಮಾಜಕ್ಕೆ ಅನ್ಯಾಯ ಮಾಡಿವೆ ಎಂದು ಎರಡೂ ಪಕ್ಷಗಳ ವಿರುದ್ಧ ಕುರುಬ ಸಮಾಜದ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ 15 ಹಾಗೂ ಕಾಂಗ್ರೆಸ್ನಿಂದ 20 ಟಿಕೆಟ್ನ್ನು ಹಾಲುಮತ ಸಮಾಜದ ಆಕಾಂಕ್ಷಿಗಳಿಗೆ ನೀಡಬೇಕು ಆದರೆ, ಯಾವುದೇ ಪಕ್ಷಗಳು ಹಾಲುಮತದ ಆಕಾಂಕ್ಷಿಗಳು ಸರಿಯಾಗಿ ಟಿಕೆಟ್ ಘೋಷಣೆ ಮಾಡುತ್ತಿಲ್ಲ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಕೆ.ಎಸ್.ಈಶ್ವರಪ್ಪನವರು ಅಂತವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವುದು ದುರದೃಷ್ಟಕರ ಈಶ್ವರಪ್ಪನವರಿಂದ ರಾಜೀನಾಮೆ ಪಡೆದುಕೊಳ್ಳದೇ ಅವರಿಗೆ ಇದೊಂದು ಬಾರಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಹಾಲುಮತದ ಯಾವುದೇ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡದೇ ಮೋಸ ಮಾಡಬಾರದು ಎಂದು ಮಠಾಧೀಶರು ಒತ್ತಾಯಿಸಿದ್ದಾರೆ.
ರೋಣ ವಿಧಾನಸಭಾ ಕ್ಷೇತ್ರದ ಟಿಕೆಟ್ನ್ನು ಹಾಲುಮತದ ಅಭ್ಯರ್ಥಿಗೆ ಬಿಜೆಪಿ ನೀಡಬೇಕು. ನವಲಗುಂದ ಕಾಂಗ್ರೆಸ್ ಟಿಕೆಟ್ನ್ನು ಹಾಲುಮತದ ಅಭ್ಯರ್ಥಿಗೆ ನೀಡದೇ ಮೋಸ ಮಾಡಲಾಗಿದೆ. ಟಿಕೆಟ್ ಘೋಷಣೆಗೆ ಇನ್ನೂ ಅವಕಾಶವಿದ್ದು, ತಮ್ಮ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಅಥಣಿಯ ಅಮರೇಶ್ವರ ಸ್ವಾಮೀಜಿ, ಮೆಟಗುಡ್ಡದ ಲಕ್ಕಪ್ಪ ಮಹಾರಾಜರು, ಸಿದ್ಧಸಿರಿ ಆಶ್ರಮದ ಬನಸಿದ್ಧ ಮಹಾರಾಜರು ಒತ್ತಾಯಿಸಿದ್ದಾರೆ.