ನಾನು ಸಾಯೋ ಮುಂಚೆ ತನ್ನ ಮೊಮ್ಮಕ್ಕಳ ಮದುವೆ ನೋಡಬೇಕು ಎಂಬುದು ಅಜ್ಜ ಅಜ್ಜಿಯಂದಿರ ಕನಸು. ಆ ಕನಸು ನನಸಾದರಂತೂ ಸಂಭ್ರಮ. ಹೌದು ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ನೇಪಾಳದ 96ರ ಇಳಿ ವಯಸ್ಸಿನ ವ್ಯಕ್ತಿ ತನ್ನ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ.
Video Player
00:00
00:25
ಅಜ್ಜ ಸಖತ್ ಡಾನ್ಸ್ ಸ್ಟೆಪ್ ವಿಡಿಯೋದಲ್ಲಿ ಸರೆಯಾಗಿದ್ದು, ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಅಜ್ಜ ಸಾಂಪ್ರದಾಯಿಕ ನೇಪಾಳಿ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದು. age just a number ಅನ್ನುವ ಮಾತಿನಂತೆ ಯವಕರೇ ನಾಚುವಂತೆ ಸ್ಟೆಪ್ ಹಾಕಿದ್ದಾರೆ. ಮೊಮ್ಮಗನ ಮದುವೆಯಲ್ಲಿ 96ರ ವಯಸ್ಸಿನ ತಾತನ ಭರ್ಜರಿ ಡಾನ್ಸ್ ವೈರಲ್ ವಿಡಿಯೋ ಇಲ್ಲಿದೆ ನೋಡಿ: