ಬೈರುತ್ (ಎಎಫ್ಪಿ): ಯುದ್ಧಪೀಡಿತ ಸಿರಿಯಾದ ಕೇಂದ್ರ ನಗರ ಹಮಾದ ಪೂರ್ವ ಮರುಭೂಮಿಯಲ್ಲಿ ಭಾನುವಾರ ಶಂಕಿತ ಐ.ಎಸ್ ಉಗ್ರರ ಗಂಪು ನಡೆಸಿರುವ ಭೀಕರ ದಾಳಿಯಲ್ಲಿ 31 ಜನರು ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಮೃತರಲ್ಲಿ ಸಿರಿಯಾ ಸರ್ಕಾರದ 12 ಸೈನಿಕರು ಸೇರಿದ್ದಾರೆ ಎಂದು ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ‘ಸನಾ (ಎಸ್ಎಎನ್ಎ)’ ವರದಿ ಮಾಡಿದೆ.
ಪ್ರತ್ಯೇಕ ಘಟನೆಯಲ್ಲಿ ಜಿಹಾದಿ ಉಗ್ರರು ಕುರಿ ಕಾಯುವ ನಾಲ್ವರನ್ನು ಕೊಂದು, ಇಬ್ಬರನ್ನು ಅಪಹರಿಸಿದ್ದಾರೆ ಎಂದೂ ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ಸಂಸ್ಥೆಯೊಂದು ವರದಿಯಲ್ಲಿ ಉಲ್ಲೇಖಿಸಿದೆ.