ಬೆಂಗಳೂರು: ಕಳೆದ 34 ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೀರಪ್ಪನ್ ಸಹಚರನಾದ ಮೀಸೆ ಮಾದಯ್ಯ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಈತನನ್ನು ದಾಖಲು ಮಾಡಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಸೆ ಮಾದಯ್ಯನಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ವೀರಪ್ಪನ್ನ ಇನ್ನುಳಿದ ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು. ಮೀಸೆ ಮಾದಯ್ಯ ಕೂಡ ಹೀಗೇ ಮೃತಪಟ್ಟಿದ್ದಾನೆ. ಸದ್ಯ ವಿಕ್ಟೋರಿಯಾ ಶವಾಗಾರದಲ್ಲಿ ಮೀಸೆ ಮಾದಯ್ಯನ ಶವ ಇದೆ. ಜೈಲು ಅಧಿಕಾರಿಗಳು ಶವ ವಿಲೇವಾರಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಮತ್ತೊಬ್ಬ ವೀರಪ್ಪನ್ ಸಹಚರ ಆರೋಪಿಸಿದ್ದಾನೆ.