ಬೆಂಗಳೂರು: ಆಟವಾಡಲು ಜೆಪಿ ಪಾರ್ಕ್ಗೆ ಹೋಗಿದ್ದ ಬಾಲಕ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ. ಬೆಂಗಳೂರಿನ ಮತ್ತಿಕೆರೆ ಸಮೀಪದ ಜೆ.ಪಿ.ಪಾರ್ಕ್ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. 13 ವರ್ಷದ ಸಂಜಯ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಕೆರೆಯ ಬಳಿ ಇರುವ ಜೆಪಿ ಪಾರ್ಕ್ ಉದ್ಯಾನದ ಬಳಿ ಆಟವಾಡಲು ತೆರಳಿದ್ದ ಬಾಲಕ ಕೆರೆಯೊಳಗೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾನೆ. ಆಟವಾಡುತ್ತಿದ್ದ ಸಂಜಯ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದಿದ್ದಾನೆ. ಇನ್ನು ವಾಯು ವಿಹಾರಿಗಳು ನೋಡ ನೋಡುತ್ತಿದ್ದಂತೆಯೇ ಹತ್ತಾರು ಜನರ ಮುಂದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮೃತ ಸಂಜಯ್ ಜೆ.ಪಿ. ಪಾರ್ಕ್ ಸಮೀಪದ ಮೋಹನ್ ಕುಮಾರ್ ಲೇಔಟ್ ನಿವಾಸಿ ಆಗಿದ್ದಾನೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ರಜೆ ಇರುವ ಕಾರಣ ಉದ್ಯಾನದ ಬಳಿ ಆಟವಾಡಲು ಬಂದಿದ್ದನು. ಆದರೆ, ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇನ್ನು ಘಟನೆಯ ಬಗ್ಗೆ ತಿಳಿಯುತ್ತಿ ದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಸದ್ಯ ಅಗ್ನಿಶಾಮಕ ಕೆರೆಗೆ ಬಿದ್ದು ಮುಳುಗಿರುವ ಸಂಜಯ್ ಶವದ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.