ದೇವನಹಳ್ಳಿ: ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ.. ಎಲ್ಲಾ ನಾಯಕರು, ಅಧಿಕಾರಿಗಳು ಚುನಾವಣೆಯತ್ತ ತಮ್ಮ ಗಮನವನ್ನು ಹರಿಸಿದ್ದಾರೆ.. ಆದ್ರೆ ಈ ಐದಾರು ಗ್ರಾಮದ ಜನರು ಕೈಗಾರಿಕಾ ತ್ಯಾಜ್ಯ ನೀರು, ನಗರಸಭೆ ಮಲೀನ ನೀರಿನಿಂದ ಬೇಸತ್ತು ಪರದಾಡುತ್ತಿದ್ದಾರೆ.. ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಹಲವು ಬಾರಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ರೂ ಸರಿಯಾಗದಿರುವುದರಿಂದ ಸರ್ಕಾರಕ್ಕೆ ಮತದಾನದ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಸುಮಾರು 30 ಕಿ.ಮೀ ದೂರವಿರುವ ಈ ಪ್ರದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರು, ಚಿಕ್ಕತುಮಕೂರು, ಜಿಂಕೆ ಬಚ್ಚಳ್ಳಿ ಗ್ರಾಮಗಳು..
ಆದ್ರೆ ಸ್ವಚ್ಚ ವಾಗಿದ್ದ ಗ್ರಾಮಗಳ ಕೆರೆಗಳಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು ಹಾಗೂ ದೊಡ್ಡಬಳ್ಳಾಪುರ ನಗರ ಸಭೆಯ ಕಲುಷಿತ ನೀರನ್ನು ಶುದ್ದಿಕರಿಸದೇ ಈ ಬಾಗದ ಕೆರೆಗಳಿಗೆ ಬಿಡುತ್ತಿದ್ದಾರೆ.. ಒಂದು ಕಡೆ ಕೈಗಾರಿಕೆಗಳು ಆರಂಭಗೊಂಡು ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಅಂತ ಸರ್ಕಾರ ಮುಂದಾದ್ರೆ ಮತ್ತೊಂದು ಕಡೆ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಯಲು ಬಿಟ್ಟು, ಅಂತರ್ಜಾಲ ಸೇರಿ ಕಲುಷಿತಗೊಳ್ಳುತ್ತಿವೆ.. ಈ ನೀರನ್ನು ಸೇವನೆ ಮಾಡುವ ಜನರು ಹಾಗೂ ಜಾನುವಾರುಗಳು ಹಲವು ರೋಗಗಳಿಗೆ ತುತ್ತಾಗಿ ಪರದಾಟ ನಡೆಸುತ್ತಿದ್ದಾರೆ.. ಸರ್ಕಾರಕ್ಕೆ ಇದರ ಕುರಿತು ಹಲವು ಬಾರಿ ಮನವಿ ಮಾಡಿದ್ರು ಸರಿಯಾಗದ ಹಿನ್ನೆಲೆ ಈ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ..
ಹೀಗಾಗಲೇ ಎಲ್ಲಾ ಗ್ರಾಮದ ಜನರ ಬಳಿ ಹೋಗಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಸರಿಯಾಗಿದೆಯೆ ಇಲ್ಲ ಅಥವಾ ಇದಕ್ಕೆ ನಿಮಗೆ ಒಪ್ಪಿಗೆ ಇದೆಯಾ ಅನ್ನೋದನ್ನು ಅವರ ಬಳಿ ಕೇಳಿ ಸಹಿ ಸಂಗ್ರಹ ಮಾಡಲಾಗಿದ್ದು, 98 ಪರ್ಸೆಂಟ್ ಜನರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.. ಇದರಿಂದ ಆದ್ರೂ ಸಂಬಂಧಿಸಿದ ಅಧಿಕಾರಿಗಳು ಜನರ ಬಳಿ ಬಂದು ಮತದಾನ ಬಹಿಷ್ಕಾರ ಮಾಡದಂತೆ ತಡೆಯುತ್ತಾರಾ? ಅಥವಾ ಅವರ ಸಮಸ್ಯೆಯನ್ನು ಬಗೆಹರಿಸುತ್ತಾರ ಕಾದು ನೋಡಬೇಕು..