ಬೆಂಗಳೂರು: ಪಕ್ಷೇತರರಾಗಿ ಸ್ಪರ್ದೆ ಮಾಡಬೇಕು ಅಂತ ಯೋಚಿಸಿದ್ದೇನೆ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಹೇಳಿದ್ದಾರೆ. ಈ ಸಂಬಂಧ ಪುಲಿಕೇಶಿ ನಗರದಲ್ಲಿ ಮಾತನಾಡಿದ ಅವರು, ನಮ್ಮ ಮುಖಂಡರು, ಜನತೆಯ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಅತ್ಯಂತ ಹೆಚ್ಚು ಲೀಡ್ನಿಂದ ಗೆದ್ದ ಶಾಸಕ ನಾನು. ಆದರೆ ನನಗೆ ಪಕ್ಷದ ನಡೆಯಿಂದ ನೋವುಂಟಾಗಿದೆ.
ಮೂರನೇ ಲಿಸ್ಟ್ನಲ್ಲೂ ನನಗೆ ಟಿಕೇಟ್ ನೀಡಲಿಲ್ಲ. ಇದರ ಹಿಂದೆ ಪಕ್ಷದ ಹಿರಿಯ ನಾಯಕರಿದ್ದಾರೆ. ಹಿರಿಯ ನಾಯಕರು ಯಾರು ಎಂದು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ಕ್ಷೇತ್ರದಲ್ಲಿ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಲ್ಲಾ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನನ್ನ ಬಗ್ಗೆ ಮನೆ ಮನೆಗೆ ಹೋಗಿ ಕೇಳಲಿ ಬೇಕಾದರೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.