ಮಹದೇವಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು ಕೇಂದ್ರ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅರವಿಂದ ಲಿಂಬಾವಳಿ ಗೆ ಟಿಕೆಟ್ ಕೈ ತಪ್ಪಿದ್ದು,ಇಲ್ಲಿ ಅರವಿಂದ ಲಿಂಬಾವಳಿ ಬದಲಿಗೆ, ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿ ಕುತೂಹಲ ಮೂಡಿಸಿದೆ.
ಬಿಜೆಪಿಯ ಮೊದಲ ಹಾಗೂ 2ನೇ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಯವರ ಹೆಸರನ್ನು ಕೈಬಿಡಲಾಗಿತ್ತು. ಮೂರನೇ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡದೇ ಪತ್ನಿ ಮಂಜುಳಾ ಲಿಂಬಾವಳಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಇಂದು ಮಧ್ಯಾಹ್ನ ಮಂಜುಳ ಅರವಿಂದ ಲಿಂಬಾವಳಿಯವರು ನಾಮಪತ್ರ ಸಲ್ಲಿಸಲಿದ್ದಾರೆ. ನಿನ್ನೆ ಮೂರನೇ ಪಟ್ಟಿಯಲ್ಲಿ ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಪತಿ ಅರವಿಂದ ಲಿಂಬಾವಳಿ ಹಾಗೂ ಮಗ ಸೇರಿದಂತೆ ಜ್ಯೋತಿಪುರದ ಜ್ಯೋತಿರ್ಲಿಂಗೆಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶಿರ್ವಾದ ಪಡೆದರು.
ಮಹದೇವಪುರ ಟಿಕೆಟ್ ವಿಚಾರದಲ್ಲಿ ಗೊಂದಲದ ಗೂಡಾಗಿದ್ದ ಬಿಜೆಪಿ ಹೈಕಮಾಂಡ್ ಇಪ್ಪತ್ತಕ್ಕೂ ಹೆಚ್ಚು ಹೊಸ ಮುಖಗಳ ಹೆಸರುಗಳು ಒಂದು ವಾರಗಳ ಕಾಲ ಕೇಳಿ ಬಂದಿದ್ದವು ಆದರೆ ಹೊಸಬರು ಬಂದರೆ ಬಿಜೆಪಿ ಭದ್ರಕೋಟೆಯನ್ನ ಉಳಿಸಲು ಸಾಧ್ಯವಿಲ್ಲ ಎಂಬುದನ್ನ ಮನಗಂಡ ಬಿಜೆಪಿ ಕೇಂದ್ರದ ನಾಯಕರು ಕೊನೆಗೆ ಅರವಿಂದ ಲಿಂಬಾವಳಿಯವರ ಪತ್ನಿ ಮಂಜುಳಾ ಲಿಂಬಾವಳಿಯವರಿಗೆ ಮಣೆಯಾಕಿದೆ.
ಲಿಂಬಾವಳಿಯವರ ಕುಟುಂಬಕ್ಕೆ ಟಿಕೆಟ್ ನೀಡಿದರಿಂದ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿಯವರ ಹೆಸರು ಉಳಿಸಲು ಹೆಚ್ಚು ಶ್ರಮವಹಿಸಿ ಕೆಲಸ ಮಾಡಲು ಮುಖಂಡರು ಮತ್ತು ಕಾರ್ಯಕರ್ತರು ಮುಂದಾಗಿದ್ದಾರೆ.