ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ವಿದೇಶದಲ್ಲೇ ಸೆಟಲ್ ಆಗಿರುವ ನಟಿ ಇದೀಗ ಹಾಲಿವುಡ್ನ ‘ಸಿಟಾಡೆಲ್’ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪಿಗ್ಗಿ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಾಗಿದ್ದಾರೆ.
ನಟಿ ಪ್ರಿಯಾಂಕ ಚೋಪ್ರಾ ವಿದೇಶದಲ್ಲಿ ಸೆಟಲ್ ಆದ ಬೆನ್ನಲ್ಲೇ ಮುಂಬೈನಲ್ಲಿರುವ 7 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಅವರು ಶಾಶ್ವತವಾಗಿ ಮುಂಬೈ ಜೊತೆಗಿನ ನಂಟನ್ನು ನಟಿ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾಗೆ ಮುಂಬೈ ನಗರದ ಜೊತೆ ವಿಶೇಷ ನಂಟ್ಟಿದ್ದು, ಬಾಲ್ಯ, ವೃತ್ತಿ ಜೀವನ, ಸೋಲು- ಗೆಲುವು ಈ ಎಲ್ಲವನ್ನು ಅವರು ಮುಂಬೈನಲ್ಲಿ ನೋಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದ ಪ್ರಿಯಾಂಕ ಚೋಪ್ರಾ ಕೆಲ ದಿನ ಕಳೆದಿದ್ದು, ಮಗಳು ಮಾಲ್ತಿ ಮೇರಿ ಜೊತೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ 2018ರಲ್ಲಿ ಅಮೆರಿಕಕ್ಕೆ ಶಿಫ್ಟ್ ಆದ ಪ್ರಿಯಾಂಕ ಬಳಿಕ ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳಿಂದ ಅವರಿಗೆ ಅವಕಾಶಗಳು ಸಿಗುತ್ತಿದ್ದು, ಸದ್ಯ ಅವರು ಹಿಂದಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇಷ್ಟು ವರ್ಷಗಳ ಕಾಲ ಮುಂಬೈನ ಜಾಗವನ್ನು ಬಾಡಿಗೆಗೆ ನೀಡಿದ್ದ ಪಿಗ್ಗಿ ಇದೀಗ ಜಾಗವನ್ನು ಮಾರಾಟ ಮಾಡಿದ್ದಾರೆ.