ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ತಿಂಗಳುಗಟ್ಟಲೆ ನರಕಯಾತನೆ ಅನುಭವಿಸಿದ್ದಾರೆ. ತಿಂದ ಅನ್ನ ಅರಗಿಸಿಕೊಳ್ಳಲಾಗದೆ ಹೇಳಿಕೊಳ್ಳ ಲಾಗದ ಹೊಟ್ಟೆನೋವು ಅನುಭವಿಸಿದ್ದಾರೆ. ಜಗಿತ್ಯಾಲ ಜಿಲ್ಲೆಯವರಾದ ನವ್ಯಾ ಸರಿಯಾಗಿ 16 ತಿಂಗಳ ಹಿಂದೆ ಹೆರಿಗೆಗಾಗಿ ಜಗಿತ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಚಿಕಿತ್ಸೆ ಬಳಿಕ ಮನೆಗೆ ಕಳುಹಿಸಿದ್ದಾರೆ. ಆ ನಂತರ, ನವ್ಯಾ ನರಳತೊಡಗಿದ್ದಾರೆ. ಪ್ರತಿದಿನ ಹೊಟ್ಟೆ ನೋವು ಅನುಭವಿಸಿದ್ದಾರೆ. ಆಕೆಯ ಸ್ಥಿತಿ ಕಂಡು ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಇನ್ನು ನೋವು ಸಹಿಸಿಕೊಳ್ಳುತ್ತಾ ಕಾಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿದ ಕುಟುಂಬಸ್ಥರು ನವ್ಯಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಿಸಿದಾಗ ಅವರಿಗೆ ಭಯಾನಕ ಸತ್ಯ ತಿಳಿದಿದೆ. ಹೊಟ್ಟೆಯಲ್ಲಿ ಬಟ್ಟೆಯಿರುವುದು ಪತ್ತೆಯಾಗಿದೆ! ಆಪರೇಷನ್ ಮಾಡಿದ ವೈದ್ಯರು ಬಟ್ಟೆ ಹೊರತೆಗೆದಿದ್ದಾರೆ. ಬಟ್ಟೆ ತೆಗೆಯುವಾಗ ವಿಡಿಯೋ ಮಾಡಲಾಗಿದೆ. ಇಷ್ಟು ದಿನ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಬಟ್ಟೆಯನ್ನು ಹಾಕಿಕೊಂಡು ಆಕೆ ಅನುಭವಿಸಿದ ನರಕಯಾತನೆಯ ಬಗ್ಗೆ ಯೋಚಿಸಿದರೆ ಕಣ್ಣಲ್ಲಿ ನೀರು ಬರುವಂತಿದೆ.
ಆಪರೇಷನ್ ಮಾಡುತ್ತಾ ಹೊಟ್ಟೆಯಿಂದ ಬಟ್ಟೆ ತೆಗೆಯುತ್ತಿರುವ ದೃಶ್ಯಗಳು ಭಯಾನಕವಾಗಿ ಕಂಡುಬಂದಿದೆ. ಸಾಮಾನ್ಯವಾಗಿ ಆಪರೇಷನ್ ಥಿಯೇಟರ್ ನಲ್ಲಿ ಕಾಟನ್ ಬಟ್ಟೆ ಇರುತ್ತದೆ. ಆದರೆ ದೃಶ್ಯಗಳಲ್ಲಿ, ವಿಭಿನ್ನ ಬಟ್ಟೆ ಕಂಡುಬರುತ್ತದೆ. ಆ ಬಟ್ಟೆ ಆಪರೇಷನ್ ಥಿಯೇಟರ್ ಗೆ ಹೇಗೆ ಬಂತು? ಹಿಂದಿನ ವೈದ್ಯರು ಯಾಕೆ ಹೀಗೆ ಮಾಡಿದರು? ಎಂಬ ಪ್ರಶ್ನೆಗಳು ಕಾಡುತ್ತಿವೆ.
ಸದ್ಯಕ್ಕೆ ನವ್ಯ ಸೇಫ್ ಆಗಿದ್ದಾರೆ. ಆದರೆ ಏನಾದರೂ ಅಹಿತಕರ ಸಂಭವಿಸಿದರೆ ಹಯಾರು ಹೊಣೆ? ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗೆ ಹೋಗುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ. ಅಂತಹುದರಲ್ಲಿ ಇಂತಹ ಘಟನೆಗಳನ್ನು ನೋಡಿ ಯಾರಾದರೂ ಆ ಕಡೆ ಹೋಗುತ್ತಾರೆಯೇ, ವೈದ್ಯರು ಯಾಕೆ ಹೀಗೆ ಮಾಡುತ್ತಿದ್ದಾರೆ? ವೈದ್ಯೋ ನಾರಾಯಣೋ ಹರಿ ಅನ್ನುತ್ತಾರೆ. ಆದರೆ ಕೆಲವು ವೈದ್ಯರು ಆ ಅರ್ಥವನ್ನು ಬದಲಾಯಿಸುತ್ತಿದ್ದಾರೆ.