ಬೆಂಗಳೂರು: KGF ಬಾಬು ಅವರ ಬೆಂಗಳೂರಿನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ ವೇಳೆ 2000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್, 5000 ಸೀರೆಗಳು ಜಪ್ತಿ ಮಾಡಲಾಗಿದೆ. ವಿಧಾನ ಸಭೆ ಚುನಾವಣೆ ಹೊತ್ತಲ್ಲೆ ಕೆಜಿಎಫ್ ಬಾಬು ಅವರಿಗೆ ಐಟಿ ಅಧಿಕಾರಿಗಳ ಶಾಕ್ ನೀಡಿದ್ದು, ಕೆಜಿಎಫ್ ಬಾಬು ಬೆಂಗಳೂರು ನಿವಾಸದ ಮೇಲೆ ದಾಳಿ ಮಾಡಿದಾಗ ಸೀರೆ ಸಾಮಾಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಹೆಸರು ಫೋಟೋಗಳು ಪತ್ತೆಯಾಗಿದ ಬೆನ್ನಲ್ಲೆ ಜಪ್ತಿಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಉಮ್ರಾ ಪೌಂಡೇಶನ್ ಹೆಸರಿನಲ್ಲಿ ತಲಾ 1,105 ಮೌಲ್ಯದ ಸೀರೆ ಸೇರಿದಂತೆ ವಸ್ತುಗಳನ್ನು ಜಪ್ತಿಯಾಗಿದೆ. ಕೆಜಿಎಫ್ ಬಾಬು ಅವರು ತಮ್ಮ ಎರಡನೇ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ. ಶಾಝಿಯಾ ತರನ್ನುಮ್ ಅವರ ನಾಮಪತ್ರದ ಜತೆಗೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಕೆಜಿಎಫ್ ಬಾಬು ಅವರ ಆಸ್ತಿ ಮೌಲ್ಯ 1621 ಕೋಟಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಅಧಿಕೃತವಾಗಿಯೇ ಇಷ್ಟೊಂದು ಆಸ್ತಿ ಇದೆ ಎಂದು ಹೇಳಿಕೊಂಡಿರುವ ಕೆಜಿಎಫ್ ಬಾಬು ಅವರ ಬಳಿ ಇನ್ನಷ್ಟು ಬೇರೆ ಆಸ್ತಿ ಇರಬಹುದು ಎನ್ನುವುದು ಲೆಕ್ಕಾಚಾರವಾಗಿದೆ. ಇದೆಲ್ಲದರ ದಾಖಲೆ ಪಡೆಯುವ ಉದ್ದೇಶದಿಂದ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.