ಹುಬ್ಬಳ್ಳಿ: ಅಂದು ಆ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಇನ್ನೆನು ಜಾತ್ರೆ ಮುಗಿಯಬೇಕಿತ್ತು. ಆದ್ರೆ ಅಲ್ಲಿ ಎರಡು ಗುಂಪುಗಳ ನಡುವಿನ ಜಗಳ ಬಿಡಿಸಿದ್ದೆ ಆತನ ಜೀವಕ್ಕೆ ಕುತ್ತು ತಂದಿದೆ..ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆಗೆ ಧಾರವಾಡ ಮತ್ತೊಮ್ಮೆ ಬೆದರಿದೆ..ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು!!! ಹೀಗೆ ಶವಾಗಾರದ ಬಳಿ ಜಮಾಯಿಸಿರುವ ಜನರು..ಆಸ್ಪತ್ರೆ ಸುತ್ತಮುತ್ತ ಪೊಲೀಸರ ದಂಡು..ಅಷ್ಟಕ್ಕೂ ಇಲ್ಲಿ ಏನೋ ನಡೆಯಬಾರದ ಘಟನೆ ನಡೆದಿದೆ ಅನ್ನೋದಕ್ಕೆ ಇವೆಲ್ಲವೂ ಸಾಕ್ಷಿ..ಹೌದು ನಿನ್ನೆ ಗ್ರಾಮದೇವತೆ ಉಡಚಮ್ಮದೇವಿ ಜಾತ್ರೆಯ ವೇಳೆಯಲ್ಲೇ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ..ಧಾರವಾಡ ಜಿಲ್ಲೆಯ ಕೋಟೂರು ಗ್ರಾಮದ ಪ್ರವೀಣ್ ಕಮ್ಮಾರ ನಿನ್ನೆ ಹತ್ಯೆಯಾಗಿದ್ದಾನೆ..ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಪರ ಅಬ್ಬರದ ಪ್ರಚಾರ ಮಾಡಿ ಮನೆಗೆ ತೆರಳಿದ್ದ ಪ್ರವೀಣ ಗ್ರಾಮದ ಜಾತ್ರೆಯಲ್ಲಿ ಭಾಗಿಯಾಗಿದ್ದ. ಈ ವೇಳೆ ಕೆಲ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಬೇರೆ ಗುಂಪಿನೊಂದಿಗೆ ಜಗಳಕ್ಕೆ ನಿಂತಿದ್ರು, ಇದನ್ನು ಗಮನಿಸಿದ್ದ ಪ್ರವೀಣ್ ಜಗಳ ಬಿಡಿಸಿ ಇಬ್ಬರಿಗೂ ಬೈದು ಕಳಿಸಿದ್ದ..ಇದನ್ನೇ ಟಾರ್ಗೆಟ್ ಮಾಡಿದ ಹಂತಕರು ರಾತ್ರಿವೇಳೆ ಮತ್ತೊಮ್ಮೆ ಜಗಳಕ್ಕೆ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ..ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ…..
ಇನ್ನು ಇದೊಂದು ರಾಜಕೀಯ ಕೊಲೆ ಅಂತ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ..ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶವಾಗಾರಕ್ಕೆ ಭೇಟಿ ನೀಡಿ ಮೃತ ದೇಹವನ್ನ ನೋಡಿ ಪ್ರತಿಕ್ರಿಯೆ ನೀಡಿದ್ದು, ಹಳೆಯ ಗೂಂಡಾ ಪ್ರವೃತ್ತಿ ಮತ್ತೆ ಆರಂಭವಾಗಿದ್ದು ಇದರಲ್ಲಿ ಆತಂಕ ಹೆಚ್ಚಾಗಿದೆ ಅಂದಿದ್ದಾರೆ..ಅಲ್ಲದೆ ಆತ ಲಿಂಗಾಯತ ಪಂಚಮಸಾಲಿಯ ಯುವಕನಾಗಿದ್ದು, ರಾಜಕೀಯ ದ್ವೇಷ ಇಟ್ಟುಕೊಂಡೆ ಈ ರೀತಿ ಮಾಡಲಾಗಿದೆ..ಈ ಹಿಂದೆ ಶಾಸಕ ಅಮೃತ್ ದೇಸಾಯಿ ಸಹ ಆತನಿಗೆ ಹೆಚ್ಚು ಟಾರ್ಗೆಟ್ ಆಗಿದ್ದಿಯಾ ಹುಷಾರಾಗಿರು ಅಂತಲೂ ಹೇಳಿದ್ರು ಅಂತ ಜೋಶಿ ಹೇಳಿದ್ದಾರೆ…..
ಒಂದು ಕಡೆ ಚುನಾವಣಾ ಕಾವು ಜೋರಾಗುವ ಸಮಯದಲ್ಲಿ ಕಾರ್ಯಕರ್ತರ ಸಾವಾಗಿದ್ದು, ಬಿಜೆಪಿಯಲ್ಲಿ ಆತಂಕ ಸೃಷ್ಟಿಯಾಗಿದೆ..
ಒಟ್ಟಾರೆ ಯಾರದ್ದೋ ಜಗಳ ಬಿಡಿಸಲು ಹೋದವ ಈ ರೀತಿ ಬರ್ಬರ ಅಂತ್ಯ ಕಂಡಿದ್ದು ನಿಜಕ್ಕೂ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ..ಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗೋವರೆಗೂ ನಾವು ಜೊತೆಗೆ ಇರ್ತೀವಿ ಅಂದಿರೋ ನಾಯಕರು ಈ ಪ್ರಕರಣವನ್ನು ಯಾವ ರೀತಿಯಾಗಿ ಕೊಂಡೊಯ್ಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವರದಿ: ಕಲ್ಮೇಶ ಮಂಡ್ಯಾಳ, ಹುಬ್ಬಳ್ಳಿ ಧಾರವಾಡ