ಇಲ್ಲೊಬ್ಬ ಮಹಿಳೆ ಮಾತ್ರ ಸೀರೆಯನ್ನುಂಟುಕೊಂಡು ಮ್ಯಾರಥಾನ್ನಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಅಸಂಬಲ್ಪುರಿ ಸೀರೆ (Saree)ಯುಟ್ಟ UK ಮೂಲದ ಒಡಿಯಾ ಮಹಿಳೆ (Odia woman) ಮ್ಯಾಂಚೆಸ್ಟರ್ನಲ್ಲಿ 42.5-ಕಿಲೋಮೀಟರ್ ಮ್ಯಾರಥಾನ್ ಓಡಿದರು. ಈ ಮ್ಯಾರಥಾನ್ನ್ನು ಅವರು ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಮ್ಯಾಂಚೆಸ್ಟರ್ನಲ್ಲಿ ಪ್ರೌಢಶಾಲಾ ಶಿಕ್ಷಕಿ (Teacher)ಯಾಗಿರುವ ನಲವತ್ತೊಂದು ವರ್ಷದ ಮಧುಸ್ಮಿತಾ ಜೆನಾ ಸೀರೆಯನ್ನುಂಟು ಕೊಂಡು ಮ್ಯಾರಥಾನ್ಗೆ ಬಂದಾಗ ಎಲ್ಲರೂ ಆಶ್ಚರ್ಯಚಕಿತರಾದರು.
ಅದರಲ್ಲೂ ಸೀರೆಯುಟ್ಟು ಮಧುಸ್ಮಿತಾ ಓಡಿದ ರೀತಿ ಎಲ್ಲರೂ ಬೆರಗುಗೊಳ್ಳುವಂತೆ ಮಾಡಿತು. ಹಾಗೆಂದು ಇದು ಮಧುಸ್ಮಿತಾ ಓಡಿರುವ ಮೊದಲ ಮ್ಯಾರಥಾನ್ ಅಲ್ಲ. ಈ ಹಿಂದೆ ಅವರು ಜಗತ್ತಿನಾದ್ಯಂತ ಅನೇಕ ಮ್ಯಾರಥಾನ್ಗಳು ಮತ್ತು ಅಲ್ಟ್ರಾ-ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದರು. ಆದರೆ ಸೀರೆ ಉಟ್ಟು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದು ಇದೇ ಮೊದಲು. ಸೀರೆಯಲ್ಲಿ ನಡೆಯುವುದೇ ಕಷ್ಟ. ಹೀಗಿರುವಾಗ ಸೀರೆಯುಟ್ಟು ಓಡಿರುವ ಮಧುಸ್ಮಿತಾ ನಡೆಗೆ ಎಲ್ಲರೂ ಮೆಚ್ಚುಗೆ (Compliment) ಸೂಚಿಸಿದ್ದಾರೆ. ವಾಯುವ್ಯ ಇಂಗ್ಲೆಂಡ್ ಒಡಿಯಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ. ಕಳೆದ ವರ್ಷ, ಒಡಿಶಾ ಸೊಸೈಟಿ ಆಫ್ ಯುಕೆ ಸಮಾವೇಶದಲ್ಲಿ ಕ್ರೀಡಾ ಸಾಧನೆಗಾಗಿ ಅವರನ್ನು ಗೌರವಿಸಲಾಗಿತ್ತು.
ಸೀರೆ ಉಟ್ಟುಕೊಂಡು ಮ್ಯಾರಥಾನ್ ಓಡಿದ ಏಕೈಕ ವ್ಯಕ್ತಿ ನಾನು ಎಂದಿದ್ದಾರೆ ಮಧುಸ್ಮಿತಾ. ಸೀರೆಯಲ್ಲಿ ತುಂಬಾ ಸಮಯ ಓಡುವುದು ಹೆಚ್ಚು ಕಷ್ಟ. ಆದರೆ ನಾನು 4.50 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ನನಗೆ ಸಂತೋಷವಾಗಿದೆ ಎಂದು ಸಂತಸ (Happiness) ವ್ಯಕ್ತಪಡಿಸಿದ್ದಾರೆ. ಈ ಮ್ಯಾರಥಾನ್ಗೆ ತನ್ನ ತಾಯಿ ಮತ್ತು ಅಜ್ಜಿಯಿಂದ ಸ್ಫೂರ್ತಿ ಪಡೆದಿದ್ದಾಗೆ ತಿಳಿಸಿದ್ದಾರೆ. ಮಧುಸ್ಮಿತಾ ದಿನನಿತ್ಯ ಮನೆಯಲ್ಲಿಯೂ ಸೀರೆ ಉಡುತ್ತಾರಂತೆ. ಮಹಿಳೆಯರು ಸೀರೆಯನ್ನು ಧರಿಸಿ ಓಡಲಾರರು ಎಂದು ಹಲವರು ಹೇಳುತ್ತಾರೆ. ಆದರೆ ನಾನು ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿ ಆರಾಮವಾಗಿ ಓಡಾಡಬಲ್ಲೆ, ಓಡಬಲ್ಲೆ ಎಂದು ಮಧುಸ್ಮಿತಾ ಹೇಳಿದರು.