ವಾಷಿಂಗ್ಟನ್: ಸಾಕಷ್ಟು ಬಿಗಿಭದ್ರತೆಯ ನಡುವೆಯೂ ಅಮೆರಿಕದ ಶ್ವೇತಭವನದ ಒಳಗೆ ಮಗುವೊಂದು ನುಸುಳಿರುವ ಘಟನೆ ವರದಿಯಾಗಿದೆ.
ಅಮೆರಿಕ ಅಧ್ಯಕ್ಷರ ಸರ್ಕಾರಿ ನಿವಾಸವಾಗಿರುವ ಶ್ವೇತಭವನದ ಉತ್ತರದ ದಿಕ್ಕಿನಲ್ಲಿರುವ ಕಬ್ಬಿಣದ ತಡೆಬೇಲಿಯ ಬದಿಯಿಂದ ಮಗುವೊಂದು ನುಸುಳಿ ಶ್ವೇತ ಭವನಕ್ಕೆ ಹೋಗಿದೆ ಎನ್ನಲಾಗಿದೆ.
ಮಗುವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಮಗುವನ್ನು ಹೊರಗೆತ್ತಿಕೊಂಡು ಹೋಗಿ ಮಗುವನ್ನು ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಶ್ವೇತಭವನದ ಗುಪ್ತಚರ ವಿಭಾಗದ ಮುಖ್ಯಸ್ಥ ಆಂಥೊನಿ ಗ್ಯುಗ್ಲಿಯೆಮಿಯನ್ನು ತಿಳಿಸಿದ್ದಾರೆ.