ಜಿನೀವಾ: ಕೋವಿಡ್ ಸಾಂಕ್ರಾಮಿಕ ರೋಗವು ಇನ್ನೂ ಹೆಚ್ಚು ಭೀಕರ ಸ್ಥೀತಿಯಲ್ಲಿದ್ದು, ಊಹಿಸಲು ಅಸಾಧ್ಯವಾದ ಮತ್ತು ತ್ವರಿತ ರೂಪಾಂತರಿ ಸ್ಥಿತಿಯಲ್ಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೋವಿಡ್ನಿಂದ ಕಳೆದ 28 ದಿನಗಳಲ್ಲಿ ವಿಶ್ವದಾದ್ಯಂತ 30 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 23 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕೋವಿಡ್ ಪರೀಕ್ಷೆಯನ್ನು ತಗ್ಗಿಸಿರುವಾಗ ಇಷ್ಟೊಂದು ಪ್ರಕರಣಗಳು ದಾಖಲಾಗಿರುವುದು ಮತ್ತು ಸಾವುಗಳು ಸಂಭವಿಸಿರುವುದು ಗಮನಾರ್ಹ ಎಂದು ತಿಳಿಸಿದೆ.
ಸೋಂಕಿನ ಪ್ರಕರಣಗಳ ಸಂಖ್ಯೆ ಒಟ್ಟಾರೆ ತಗ್ಗುತ್ತಿರುವಾಗ, ಸಾವುಗಳು ಸಂಭವಿಸುತ್ತಿರುವುದು ಮತ್ತು ಬಹಳಷ್ಟು ಜನರು ಅನಾರೋಗ್ಯಕ್ಕೆ ಇನ್ನೂ ತುತ್ತಾಗುತ್ತಿರುವುದು ಮುಂದುವರಿದಿದೆ ಎಂದು ಡಬ್ಲ್ಯುಎಚ್ಒ ತುರ್ತು ವಿಭಾಗಗಳ ನಿರ್ದೇಶಕ ಮಿಖಾಯಿಲ್ ರಿಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಕೋವಿಡ್ 19 ಅನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ಕೈಬಿಡಲಾಗದು ಎಂದು ರಿಯಾನ್ ಹೇಳಿದ್ದಾರೆ.