ಕಿರುತೆರೆ ನಟಿ ದಿವ್ಯಾ ಶ್ರೀಧರ್ ಇತ್ತೀಚೆಗೆ ಹೆಣ್ಣ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡನಿಂದ ದೂರವಿರುವ ದಿವ್ಯಾ ಶ್ರೀಧರ್ ಇತ್ತೀಚೆಗಷ್ಟೇ ಮುದ್ದು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಮಗುವನ್ನು ನೋಡಬೇಕು ಎಂದು ನಟಿ ದಿವ್ಯಾ ಶ್ರೀಧರ್ ಪತಿ ನಟಿ ಅರ್ನವ್ ಕೇಳಿಕೊಂಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅನರ್ವ್, ‘ಬೇರೆಯವರ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಿರುವೆ. ನನ್ನ ಮಗುವನ್ನು ನೋಡುವುದಕ್ಕೂ ಆಗುತ್ತಿಲ್ಲ. ದಯವಿಟ್ಟು ನನ್ನ ಮಗುವಿನ ವಿಡಿಯೋವನ್ನಾದರೂ ದಿವ್ಯಾ ಹಂಚಿಕೊಳ್ಳಲಿ ಎಂದು ಕೇಳಿಕೊಂಡಿದ್ದಾರೆ. ಕಾನೂನು ಮೂಲಕ ಹೋಗಬಹುದು. ಆದರೆ, ನನಗೆ ಅದು ಇಷ್ಟವಿಲ್ಲ’ ಎಂದು ಅರ್ನವ್ ಹೇಳಿದ್ದಾರೆ.
‘ಆಕಾಶದೀಪ’ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್, ಪತಿ ಅರ್ನವ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ದಿವ್ಯಾ ಶ್ರೀಧರ್ ನೀಡಿದ ದೂರಿನ ಮೇರೆಗೆ ಪೊಲೀಸರು ಅರ್ನವ್ ನನ್ನು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತ ದಿವ್ಯಾ ಇದೀಗ ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇದೀಗ ಮಗಳನ್ನು ತೋರಿಸುವಂತೆ ಅರ್ನವ್ ಮನವಿ ಮಾಡಿದ್ದಾರೆ.