ಕಾಂಗ್ರೆಸ್ಸಿಗರು ಗಂಟೆಗೊಂದು, ಗಳಿಗೆಗೊಂದು ದಾಳ ಉರುಳಿಸುತ್ತಾರೆ. ಕಾಂಗ್ರೆಸ್ನವರ ಈ ದಾಳ ಏನೂ ನಡೆಯಲ್ಲ ಎಂದ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರ ಮಾತನಾಡಿದ ಅವರು,
ನಾಳೆ ದಿನ ಹೆಚ್ಚು ಕಡಿಮೆ ಆದ್ರೆ ಏನು ಮಾಡಬೇಕೆಂಬ ಬಗ್ಗೆ, ಲಿಂಗಾಯತ ಸಮುದಾಯ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿದ್ದೇವೆ. ಮುಂದಿನ ಸಿಎಂ ಬಗ್ಗೆ ಬಿಎಸ್ವೈ, ಬೊಮ್ಮಾಯಿ ಚರ್ಚೆ ಮಾಡ್ತಾರೆ. ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡಲು ಆಗುವುದಿಲ್ಲ. ವೀರಶೈವರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.