ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ, ಕ್ರಿಮಿನಲ್ ಗಳಿಗೆ ಡಿ.ಕೆ. ಶಿವಕುಮಾರ್ ನಾಯಕರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ. ನಮ್ಮ ಕಾರು ಹೋಗುವಾಗ ಹಿಂದೆಯಿಂದ ಹಸಿರುದ್ವಜ ಹಿಡಿದು ಬರ್ತಾರೆ, ಸಿದ್ದರಾಮಯ್ಯ ಬರ್ತಾರೆ ನಿಮ್ಮನ್ನು ನೋಡಿಕೊಳ್ಳುತ್ತಾರೆ ಅಂತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ. ಕೇರಳದಲ್ಲಿ ರಸ್ತೆಯಲ್ಲಿ ಹಸುಗಳನ್ನು ಹತ್ಯೆಗೈದ ರಸೂಲ್ ನನ್ನು ಕಾಂಗ್ರೆಸ್ ಯುವ ಮೊರ್ಚಾ ಅಧ್ಯಕ್ಷನನ್ನಾಗಿ ಮಾಡಿದೆ. ಅಂಥವನ ಜೊತೆಗೆ ಡಿ.ಕೆ.ಶಿವಕುಮಾರ್ ಓಡಾಡುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 1,700 ಪಿಎಫ್ ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ ಎಂದರು. ಇನ್ನೂ ಇದೇ ವೇಳೆ ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗರ್ಹಿ ಹೆಸರು ಇರುವುದಕ್ಕೆ ಖಂಡನೆ ವ್ಯಕ್ತಪಡಿಸಿದ ಕರಂದ್ಲಾಜೆ,
ಇಮ್ರಾನ್ ಪ್ರತಾಪ್ ಗರ್ಹಿ, ಯುಪಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಬೆಂಬಲಿಗ. ಅತೀಕ್ ಅಹಮದ್ ನನ್ನ ಗುರು ಅಂತ ಇಮ್ರಾನ್ ಪ್ರತಾಪ್ ಗರ್ಹಿ ಹೇಳ್ಕೊಳ್ತಿದ್ದ. ಇಂಥವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕ ಮಾಡಿದೆ ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಇಮ್ರಾನ್ ಪ್ರತಾಪ್ ಗರ್ಹಿ ಶಾಯರಿ ಬರೆಯುವವನು, ಅವನ ಶಾಯರಿಗಳು ದೇಶದ ವಿರುದ್ಧ ಇವೆ. ದೇಶದ ವಿರುದ್ಧ, ಸಮಾಜದ ವಿರುದ್ಧ ಶಾಯರಿ ಬರೆಯುವಾತ. ಇಮ್ರಾನ್ ರಂಥ ದೇಶದ್ರೋಹಿ, ಸಮಾಜ ದ್ರೋಹಿಗಳ ಮೇಲೆ ಕಾಂಗ್ರೆಸ್ ಗೆ ಬಹಳ ಪ್ರೀತಿ ಎಂದು ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.